ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಅಂಶು ಮಲಿಕ್!
ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿ ಕುಸ್ತಿಪಟು ಅಂಶು ಮಲಿಕ್ ಹೊರಹೊಮ್ಮಿದ್ದಾರೆ

ಓಸ್ಲೋ: ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿ ಕುಸ್ತಿಪಟು ಅಂಶು ಮಲಿಕ್ ಹೊರಹೊಮ್ಮಿದ್ದಾರೆ. ನಾರ್ವೆಯ ಓಸ್ಲೋದಲ್ಲಿ ಗುರುವಾರ ನಡೆದ 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ 2016ರ ಒಲಿಂಪಿಕ್ ಚಾಂಪಿಯನ್ ಹೆಲೆನ್ ಲೌಸಿ ಮಾರೌಲಿ ವಿರುದ್ಧ ಸೋಲುವ ಮೂಲಕ ಅಂಶು ಮಲಿಕ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು.
ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮೊದಲ ಮಹಿಳಾ ಫೈನಲಿಸ್ಟ್ ಆದ ನಂತರ ಇಂದು ನಡೆದ ಪಂದ್ಯದಲ್ಲಿ 19ರ ಹರೆಯದ ಯುವತಿ ಮೊದಲಿಗೆ ಆಕ್ರಮಣಕಾರಿ ಶೈಲಿಯಲ್ಲಿ ಆಟವಾಡಿದರು. ಆರಂಭದಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು, ಆದರೆ, ಸೆಕೆಂಡಿನಲ್ಲಿಯೇ ಪಂದ್ಯವು ನಾಟಕೀಯ ಶೈಲಿಯಲ್ಲಿ ಬದಲಾಯಿತು.
ಮೌರೌಲಿ ತನ್ನ ತೋಳಿತ ಹಿಡಿತದಲ್ಲಿ ಅಂಶು ಮಲ್ಲಿಕ್ ಅವರನ್ನು ಪಡೆದು 2-1 ಅಂತರದಲ್ಲಿ ಮುನ್ನಡೆ ಸಾಧಿಸಿದಳು. ತದನಂತರ ಅಂಶುವಿನ ಬಲಗೈಯನ್ನು ಬಿಗಿಯಾಗಿ ಹಿಡಿದುಕೊಂಡು 4-1 ಅಂಕ ಪಡೆದುಕೊಳ್ಳುವುದರೊಂದಿಗೆ ಗೆಲುವು ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


