ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಮೇರಿ ಕೋಮ್ ಗೆ ಬೆಳ್ಳಿ
ಆರು ಬಾರಿ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ) ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ದುಬೈ: ಆರು ಬಾರಿ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ) ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಮೇರಿ ಫೈನಲ್ಸ್ ನಲ್ಲಿ ಕಝಕಿಸ್ಥಾನದ ನಾಜಿಮ್ ಕಿಜೈಬೇ ವಿರುದ್ಧ ಸೋಲುಂಡು ರಜತ ಪದಕ ಗಳಿಸಿಕೊಂಡಿದ್ದಾರೆ. ಅವರು 2-3 ತೀರ್ಪಿನಿಂದ ಸೋಲುಂಡರು.
ಇನ್ನುಳಿದಂತೆ ಲಾಲ್ಬುವಾತ್ಸೈಹಿ (64 ಕೆಜಿ), ಪೂಜಾ ರಾಣಿ (75 ಕೆಜಿ) ಮತ್ತು ಅನುಪಮಾ (+ 81 ಕೆಜಿ) ವಿಭಾಗದಲ್ಲಿ ಚಿನ್ನದ ಪದಕಗಳಿಗಾಗಿ ಸೆಣೆಸುತ್ತಿದ್ದಾರೆ.
ಇದು ಪಂದ್ಯಾವಳಿಯಲ್ಲಿ ಮೇರಿ ಪಾಲಿಗೆ ಏಳನೇ ಪದಕವಾಗಿದೆ, 2003ರ ಆವೃತ್ತಿಯಲ್ಲಿ ಬಂದ ಚಿನ್ನದ ಪದಕ ಇವರ ಮೊದಲ ಪದಕವಾಗಿತ್ತು.
ತನಗೆ 11 ವರ್ಷ ಚಿಕ್ಕವನಾದ ಎದುರಾಳಿಯ ವಿರುದ್ಧ, 38 ವರ್ಷದ ಮೇರಿ ಉತ್ತಮ ಪ್ರಾರಂಭದೊಂದಿಗೆ ಮೊದಲ ಸುತ್ತನ್ನು ಅನಾಯಾಸವಾಗಿ ಗೆದ್ದಿದ್ದರು. ಆದರೆ ನಂತರದಲ್ಲಿ ಎದುರಾಳಿ ಕೈ ಮೇಲಾಗಿತ್ತು. ಅಂತಿಮ ಮೂರು ನಿಮಿಷಗಳಲ್ಲಿ ಮೇರಿ ಕೋಮ್ ಮತ್ತೆ ಹೋರಾಡಿದರು ಆದರೆ ತೀರ್ಪುಗಾರರ ಒಪ್ಪಿಗೆ ಪಡೆಯಲು ಸಫಲವಾಗಲಿಲ್ಲ.
ಸೋಮವಾರ ಪುರುಷರ ಫೈನಲ್‌ನಲ್ಲಿ ಅಮಿತ್ ಪಂಗಲ್ (52 ಕೆಜಿ), ಶಿವ ಥಾಪಾ (64 ಕೆಜಿ) ಮತ್ತು ಸಂಜೀತ್ (91 ಕೆಜಿ) ಸೆಣೆಸಲಿದ್ದಾರೆ.
ಇತರ ಎಂಟು ಭಾರತೀಯರು - ಒಲಿಂಪಿಕ್ ಅರ್ಹತೆಯ ಮೂವರು ಸಿಮ್ರಾಂಜಿತ್ ಕೌರ್ (60 ಕೆಜಿ), ವಿಕಾಸ್ ಕ್ರಿಶನ್ (69 ಕೆಜಿ), ಮತ್ತು ಲೋವ್ಲಿನಾ ಬೊರ್ಗೊಹೈನ್ (69 ಕೆಜಿ), ಮತ್ತು ಜೈಸ್ಮೈನ್ (57 ಕೆಜಿ), ಸಾಕ್ಷಿ ಚೌಧರಿ (64 ಕೆಜಿ), ಮೋನಿಕಾ (48 ಕೆಜಿ), ಸೌವೆತಿ (81 ಕೆಜಿ) ) ಮತ್ತು ವರಿಂದರ್ ಸಿಂಗ್ (60 ಕೆಜಿ) - ಸೆಮಿಫೈನಲ್ ಸೋಲಿನ ನಂತರ ಕಂಚಿನ ಪದಕಗಳನ್ನು ಜಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


