ತಂದೆ ಕೊರೋನಾಗೆ ಬಲಿಯಾದ ಕೆಲ ಗಂಟೆಗಳಲ್ಲೇ ಪುತ್ರಿ, ಶೂಟಿಂಗ್ ಕೋಚ್ ಮೊನಾಲಿ ಗೊರ್ಹೆ ಬ್ಲಾಕ್ ಫಂಗಸ್ ನಿಂದ ಸಾವು
ಭಾರತದ ಶೂಟಿಂಗ್ ಕೋಚ್ ಮತ್ತು ತಾಂತ್ರಿಕ ಅಧಿಕಾರಿ ಮೊನಾಲಿ ಗೊರ್ಹೆ(44) ಗುರುವಾರ ಬ್ಲಾಕ್ ಫಂಗಸ್ (ಮ್ಯೂಕೋರ್ಮೈಕೋಸಿಸ್) ನಿಂದ ನಿಧನರಾದರು. ಮೃತರು ಅವರ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

ನವದೆಹಲಿ: ಭಾರತದ ಶೂಟಿಂಗ್ ಕೋಚ್ ಮತ್ತು ತಾಂತ್ರಿಕ ಅಧಿಕಾರಿ ಮೊನಾಲಿ ಗೊರ್ಹೆ (44) ಗುರುವಾರ ಬ್ಲಾಕ್ ಫಂಗಸ್ (ಮ್ಯೂಕೋರ್ಮೈಕೋಸಿಸ್) ನಿಂದ ನಿಧನರಾದರು. ಮೃತರು ಅವರ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.
ಕೋವಿಡ್-19 ಕಾಣಿಸಿಕೊಂಡ ನಂತರ ಮೊನಾಲಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದರು. ಆದರೆ ಬ್ಲಾಕ್ ಫಂಗಸ್ ಕಾಣಿಸಿಕೊಂಡು ಆಕೆ ಮತ್ತೆ ಆಸ್ಪತ್ರೆ ಸೇರಿದ್ದರು.
ಇನ್ನು ಮೊನಾಲಿ ಸಾವನ್ನಪ್ಪುವ ಕೆಲ ಗಂಟೆಗಳ ಹಿಂದೆ ಅವರ ತಂದೆ ಮನೋಹರ್ ಗೊರ್ಹೆ ಕೊರೋನಾದಿಂದ ಸಾವನ್ನಪ್ಪಿದ್ದರು.
ಮೊನಾಲಿ ಪಿಸ್ತೂಲ್ ಕೋರ್ ಗುಂಪಿನ ತರಬೇತುದಾರರಾಗಿದ್ದರು. ಅವರು ಶ್ರೀಲಂಕಾದ ಶೂಟಿಂಗ್ ತಂಡದ ರಾಷ್ಟ್ರೀಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಮಹಾರಾಷ್ಟ್ರದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ನಾಸಿಕ್‌ನಲ್ಲಿ ಎಕ್ಸೆಲ್ ಶೂಟಿಂಗ್ ಎಂಬ ಶೂಟಿಂಗ್ ಕೋಚಿಂಗ್ ಸೆಂಟರ್ ಅನ್ನು ಸ್ಥಾಪಿಸಿದ್ದರು. ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಮೊನಾಲಿ ಮತ್ತು ಅವರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


