ಅರ್ಜುನ ಪ್ರಶಸ್ತಿ ವಿಜೇತ ಟೇಬಲ್ ಟೆನ್ನಿಸ್ ತಾರೆ ವಿ.ಚಂದ್ರಶೇಖರ್ ಕೊರೋನಾ ಸೋಂಕಿನಿಂದ ನಿಧನ
ಮೂರು ಬಾರಿ ರಾಷ್ಟ್ರೀಯ ಟೇಬಲ್ ಟೆನ್ನಿಸ್ ಚಾಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ವಿ.ಚಂದ್ರಶೇಖರ್ ಚೆನ್ನೈನಲ್ಲಿ ಕೊರೋನಾ ಸೋಂಕಿನಿಂದ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಚೆನ್ನೈ: ಮೂರು ಬಾರಿ ರಾಷ್ಟ್ರೀಯ ಟೇಬಲ್ ಟೆನ್ನಿಸ್ ಚಾಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದ ವಿ.ಚಂದ್ರಶೇಖರ್ ಚೆನ್ನೈನಲ್ಲಿ ಕೊರೋನಾ ಸೋಂಕಿನಿಂದ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ ಮತ್ತು ಮಗ ಇದ್ದಾರೆ.
ಟಿಟಿ ನಲ್ಲಿ 'ಚಂದ್ರ' ಎಂದು ಜನಪ್ರಿಯವಾಗಿ ಕರೆಯಲ್ಪಟ್ಟ ಚಂದ್ರಶೇಖರ್ ಕೊರೋನಾಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು ತಮಿಳಿಗ ಟೇಬಲ್ ಟೆನ್ನಿಸ್ ಸಂಘದ ಅಧ್ಯಕ್ಷರಾಗಿದ್ದರು. ಅವರು ಎಸ್‌ಡಿಎಟಿ-ಮೆಡಿಮಿಕ್ಸ್ ಟಿಟಿಯ ನಿರ್ದೇಶಕರು ಮತ್ತು ಮುಖ್ಯ ತರಬೇತುದಾರರಾಗಿದ್ದರು.
1982 ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದ ಚಂದ್ರಶೇಖರ್ ತರಬೇತುದಾರರಾಗಿ ಸಹ ಯಶಸ್ವಿಯಾಗಿದ್ದರು.
1984 ರಲ್ಲಿ ಅವರು ಬಲ ಮೊಣಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಅವರ ಕ್ರೀಡಾ ಬದುಕು ಮೊಟಕಾಗಿತ್ತು. ಆದಾಗ್ಯೂ, ಅವರು ಯಶಸ್ವಿ ತರಬೇತುದಾರನಾಗಿ ಹೊರಹೊಮ್ಮಿದ್ದರು. ಟೇಬಲ್ ಟೆನ್ನಿಸ್ ಜಗತ್ತು ಅಗಲಿದ ಕ್ರೀಡಾ ತಾರೆಗೆ ಸಂತಾಪ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


