ಟೋಕಿಯೊ ಒಲಂಪಿಕ್ಸ್: ಟೇಬಲ್ ಟೆನಿಸ್ ನಲ್ಲಿ ಶರತ್ ಗೆ ಜಯ; ಮನಿಕಾ ಬಾತ್ರಾ, ಸುತೀರ್ಥಾಗೆ ನಿರಾಸೆ
ಅನುಭವಿ ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಭರ್ಜರಿ ಪ್ರದರ್ಶನ ನೀಡಿದ್ದು ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.

ಟೋಕಿಯೊ: ಅನುಭವಿ ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಭರ್ಜರಿ ಪ್ರದರ್ಶನ ನೀಡಿದ್ದು ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.
ಸೋಮವಾರ ಟೋಕಿಯೊ ಮೆಟ್ರೋಪಾಲಿಟನ್ ಜಿಮ್ನಾಷಿಯಂನಲ್ಲಿ ನಡೆದ ಶರತ್ 2-11, 11-8, 11-5, 9-11, 11-6, 11-9 ರಿಂದ ಟಿಯಾಗೊ ಅಪೊಲೊನಿಯಾ ವಿರುದ್ಧ ಜಯ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.
ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಪದಕದ ಆಸೆ ದಿನ ಕಳೆದಂತೆ ಕಡಿಮೆಯಾಗುತ್ತಿದೆ. ಭರವಸೆ ಮೂಡಿಸಿದ್ದ ಆಟಗಾರರು ಪರಾಭವ ಅನುಭವಿಸುತ್ತಿದ್ದಾರೆ. ಅದ್ಭುತ ಪ್ರದರ್ಶನ ನೀಡುತ್ತಿದ್ದ ಭಾರತದ ಸ್ಟಾರ್ ಪ್ಯಾಡ್ಲರ್ ಮನಿಕಾ ಬಾತ್ರಾ ಪರಾಭವಗೊಂಡಿದ್ದಾರೆ. ಟೇಬಲ್ ಟೆನ್ನಿಸ್ ನ ಮಹಿಳೆಯರ ಸಿಂಗಲ್ ವಿಭಾಗದ 3ನೇ ಸುತ್ತಿನಲ್ಲಿ ಆಸ್ಟ್ರೀಯಾದ ಸೋಫಿಯಾ ವಿರುದ್ಧ 0-4 ಸೆಟ್ ಗಳಿಂದ ಸೋಲು ಅನುಭವಿಸಿದ್ದಾರೆ.
ಇದೇ ವೇಳೆ ಸುತೀರ್ಥಾ ಮುಖರ್ಜಿ ಸಹ ಎರಡನೇ ಸುತ್ತಿನಲ್ಲಿ ಪೋರ್ಚುಗಲ್ ನ ಫು ಹು ವಿರುದ್ಧ ಸೋಲು ಅನುಭವಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


