ಪ್ಯಾರಾಲಿಂಪಿಕ್ಸ್: ಪುರುಷರ 10 ಮೀ. ಏರ್ ಪಿಸ್ತೂಲ್ ಎಸ್ಎಚ್ 1 ಫೈನಲ್ನಲ್ಲಿ ಭಾರತದ ಸಿಂಗರಾಜ್ ಅಧಾನಗೆ ಕಂಚು ಪದಕ
ಇಲ್ಲಿ ನಡೆಯುತ್ತಿರುವ ಪಾರಾಲಂಪಿಕ್ಸ್ ನಲ್ಲಿ ಭಾರತದ ಪದಕ ಬೇಟಿ 8ಕ್ಕೆ ತಲುಪಿದೆ. ಮಂಗಳವಾರ ಮುಕ್ತಾಯವಾದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ ಎಚ್ 1 ಪಂದ್ಯದಲ್ಲಿ ಭಾರತದ ಶೂಟರ್ ಸಿಂಗರಾಜ್ ಅಧಾನ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಟೋಕಿಯೊ: ಇಲ್ಲಿ ನಡೆಯುತ್ತಿರುವ ಪಾರಾಲಂಪಿಕ್ಸ್ ನಲ್ಲಿ ಭಾರತದ ಪದಕ ಬೇಟಿ 8ಕ್ಕೆ ತಲುಪಿದೆ. ಮಂಗಳವಾರ ಮುಕ್ತಾಯವಾದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್ ಎಚ್ 1 ಪಂದ್ಯದಲ್ಲಿ ಭಾರತದ ಶೂಟರ್ ಸಿಂಗರಾಜ್ ಅಧಾನ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಪ್ಯಾರಾಲಂಪಿಕ್ಸ್ ನ ಪಂದ್ಯಾವಳಿ 8ನೇ ದಿನಕ್ಕೆ ಇಂದು ತಲುಪಿದ್ದು ಸಿಂಗರಾಜ್ ಅವರು ಕಂಚಿನ ಪದಕವನ್ನು ಪುರುಷರ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಗೆದ್ದುಕೊಂಡಿದ್ದಾರೆ.ಇನ್ನು ಚೀನಾ ದೇಶದ ಹೌಂಗ್ ಕ್ಸಿಂಗ್ ಮತ್ತು ಯಾಂಗ್ ಚಾವ್ ಅವರು ಬೆಳ್ಳಿ ಮತ್ತು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಒಟ್ಟು 216.8 ಅಂಕಗಳೊಂದಿಗೆ ಸಿಂಗ್ ರಾಜ್ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸಿಂಗ್ ರಾಜ್ ಅಧಾನ ಅವರು ಅದ್ಭುತ ಪ್ರದರ್ಶನ ತೋರಿಸಿದ್ದಾರೆ. ಭಾರತದ ಪ್ರತಿಭಾವಂತ ಶೂಟರ್ ದೇಶಕ್ಕೆ ಕಂಚಿನ ಪದಕವನ್ನು ತಂದು ಕೀರ್ತಿ ತಂದಿದ್ದಾರೆ. ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


