ಕ್ರೀಡೆ

ಎಚ್ಚರಿಕೆ ನೀಡಿ ವಿನೇಶ್ ಫೋಗಟ್ ಅಮಾನತು ರದ್ದು: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಅನುಮತಿ

ವಿನೇಶ್ ಜೊತೆ ಕುಸ್ತಿ ಪಟುಗಳಾದ ಸೋನಂ ಮತ್ತು ದಿವ್ಯಾ ಅವರ ಮೇಲೂ ದೂರು ದಾಖಲಾಗಿತ್ತು. ಮೂವರಿಗೂ ಮುಂದೆ ಅಶಿಸ್ತು ವರ್ತನೆ ತೋರದಂತೆ ಎಚ್ಚರಿಕೆ ನೀಡಲಾಗಿದೆ.

ಎಚ್ಚರಿಕೆ ನೀಡಿ ವಿನೇಶ್ ಫೋಗಟ್ ಅಮಾನತು ರದ್ದು: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಅನುಮತಿ
ವಿನೇಶ್ ಪೋಗಟ್
Published On :

ನವದೆಹಲಿ: ಅಶಿಸ್ತು ವರ್ತನೆ ಕಾರಣದಿಂದ ಅಮಾನತು ಶಿಕ್ಷೆಗೆ ಒಳಗಾಗಿದ್ದ ಪ್ರತಿಭಾನ್ವಿತ ಕುಸ್ತಿ ಪಟು ವಿನೇಶ್ ಪೋಗಟ್ ಅವರಿಗೆ ಎಚ್ಚರಿಕೆ ನೀಡಿದ್ದು ಅವರ ಮೇಲಿನ ಶಿಕ್ಷೆಯನ್ನು ಹಿಂಪಡೆಯಲಾಗಿದೆ. 

ಟೊಕಿಯೊ ಒಲಿಂಪಿಕ್ಸ್ ನಡೆಯುವ ವೇಳೆ ವಿನೇಶ್ ಅವರು ಸಹವರ್ತಿಗಳೊಡನೆ ವಾಸ್ತವ್ಯ ಹೂಡಲು ನಿರಾಕರಿಸಿದ್ದರು. ಅಲ್ಲದೆ ಪಂದ್ಯ ಮುಗಿದ ನಂತರ ತಂಡದ ಪ್ರಾಯೋಜಕರು ನೀಡಿದ್ದ ಜೆರ್ಸಿಯನ್ನು ತೊಡದೆ ಬೇರಾವುದೋ ಜೆರ್ಸಿಯನ್ನು ತೊಟ್ಟಿದ್ದರು. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು. 

ದೂರು ಸಂಬಂಧ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ವಿಚಾರಣೆ ನಡೆಸಿತ್ತು. ವಿನೇಶ್ ಫೋಗಟ್ ಅವರು ತಾವು ಕೊರೊನಾ ಕಾರಣದಿಂದ ಪ್ರತ್ಯೇಕ ವ್ಯವಸ್ಥೆ ಬೇಕೆಂದು ಕೇಳಿದ್ದೆ ಮತ್ತು ಬೇರೆ ಜೆರ್ಸಿ ತೊಟ್ಟಿದ್ದು ಅಚಾತುರ್ಯದಿಂದ ಉಂಟಾದ ಪ್ರಮಾದ ಎಂದು ಸ್ಪಷ್ಟನೆ ನೀಡಿದ್ದರು. 

ವಿನೇಶ್ ಜೊತೆ ಕುಸ್ತಿ ಪಟುಗಳಾದ ಸೋನಂ ಮತ್ತು ದಿವ್ಯಾ ಅವರ ಮೇಲೂ ದೂರು ದಾಖಲಾಗಿತ್ತು. ಮೂವರಿಗೂ ಮುಂದೆ ಅಶಿಸ್ತು ವರ್ತನೆ ತೋರದಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಇಂಥಾ ಘಟನೆ ಮರುಕಳಿಸಿದಲ್ಲಿ ಅವರಿಗೆ ಆಜೀವ ನಿಷೇಧ ಹೇರುವುದಾಗಿ ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.