ಉದ್ದಗೂದಲಿನ ರಹಸ್ಯ ಬಿಚ್ಚಿಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ
ಇತ್ತೀಚಿಗಷ್ಟೆ ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರು ಹಳೆಯ ಸಂದರ್ಶನವೊಂದರಲ್ಲಿ ತಮ್ಮ ಉದ್ದಗೂದಲಿನ ಕುರಿತಾಗಿ ಮಾತನಾಡಿದ್ದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರತೀಯರ ಮನಸೂರೆಗೊಂಡಿದೆ.

ನವದೆಹಲಿ: ಇತ್ತೀಚಿಗಷ್ಟೆ ಒಲಿಂಪಿಕ್ಸ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರು ಹಳೆಯ ಸಂದರ್ಶನವೊಂದರಲ್ಲಿ ತಮ್ಮ ಉದ್ದಗೂದಲಿನ ಕುರಿತಾಗಿ ಮಾತನಾಡಿದ್ದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರತೀಯರ ಮನಸೂರೆಗೊಂಡಿದೆ. ಆ ವಿಡಿಯೋದಲ್ಲಿ ನಿರೂಪಕ ನಿಮ್ಮ ಉದ್ದಗೂದಲಿನ ಹಿಂದಿನ ಪ್ರೇರಣೆ ನಟ ಶಾರುಖ್ ಖಾನ್ ಇಲ್ಲವೇ ಕ್ರಿಕೆಟಿಗ ಇಶಾಂತ್ ಶರ್ಮಾ, ಇಬ್ಬರಲ್ಲಿ ಒಬ್ಬರು ಅಲ್ಲವೇ ಎಂದು ಕೇಳುತ್ತಾನೆ. ಆಗ ನೀರಜ್ ಚೋಪ್ರಾ ಇಬ್ಬರೂ ಅಲ್ಲ ಎಂದು ಹೇಳಿ ನಿರೂಪಕನಲ್ಲಿ ಅಚ್ಚರಿ ಮೂಡಿಸುತ್ತಾರೆ.
ನಂತರ ಮುಂದುವರಿದು, ನಾನು ಇನ್ನೊಬ್ಬರನ್ನು ಅನುಸರಿಸಿ ಉದ್ದಗೂದಲನ್ನು ಬಿಟ್ಟಿಲ್ಲ, ಉದ್ದಗೂದಲು ಬಿಡಬೇಕು ಎಂದು ನನಗೇ ಅನ್ನಿಸಿತು. ಹೀಗಾಗಿ ಬಿಟ್ಟಿದ್ದೇನೆ ಅಷ್ಟೆ. ಯಾರನ್ನೂ ನಕಲು ಮಾಡಿಲ್ಲ ಎಂದು 23ರ ಹರೆಯದ ಚೋಪ್ರಾ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಚೋಪ್ರಾ ಒಂದು ಕಾಲದಲ್ಲಿ ಜಾವೆಲಿನ್ ಎಂದರೆ ಏನೆಂದೇ ಗೊತ್ತಿರಲಿಲ್ಲ. ಆದರೆ ಇಂದು ಅದರಿಂದಾಗಿಯೇ ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಹಳ್ಳಿಯ ಮೈದಾನದಲ್ಲಿ ದೊಡ್ಡ ಹುಡುಗರು ಜಾವೆಲಿನ್ ಎಸೆತ ಮಾಡುತ್ತಿದ್ದುದನ್ನು ನೋಡಿ ಆದರಿಂದ ಮೊದಲು ಆಕರ್ಷಿತರಾಗಿದ್ದಾಗಿ ನೀರಜ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
Related Article
ಒಲಂಪಿಕ್ಸ್ ಅಥ್ಲೆಟಿಕ್ಸ್ ತಂಡಕ್ಕೆ ದೆಹಲಿಯಲ್ಲಿ ಸನ್ಮಾನ, ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿ ಎಲ್ಲರೂ ಭಾಗಿ
ಚಿನ್ನ ಗೆದ್ದ ನೀರಜ್ ಚೋಪ್ರಾರನ್ನು ರಾಜ್ಯಸಭೆಯಲ್ಲಿ ಕೊಂಡಾಡಿದ ವೆಂಕಯ್ಯ ನಾಯ್ಡು
ನೀರಜ್ ಚೋಪ್ರಾರಿಂದ ಇತಿಹಾಸ ಸೃಷ್ಟಿ: ಪ್ರಧಾನಿ ಮೋದಿ; ಯುವಕರಿಗೆ ಸ್ಫೂರ್ತಿ ಎಂದ ರಾಷ್ಟ್ರಪತಿಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


