ಕ್ರೀಡೆ

ಭಾರತದ ಮಾಜಿ ಮಿಡ್‌ಫೀಲ್ಡರ್ ಕರ್ನಾಟಕ ಮೂಲದ ಕೃಷ್ಣಾಜಿ ರಾವ್ ನಿಧನ, ಎಐಎಫ್ಎಫ್ ಸಂತಾಪ

ಭಾರತ ಫುಟ್ಬಾಲ್ ತಂಡದ ಮಾಜಿ ಮಿಡ್‌ಫೀಲ್ಡರ್ ಮತ್ತು ತರಬೇತುದಾರ ಕೃಷ್ಣಾಜಿ ರಾವ್ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಭಾರತದ ಮಾಜಿ ಮಿಡ್‌ಫೀಲ್ಡರ್ ಕರ್ನಾಟಕ ಮೂಲದ ಕೃಷ್ಣಾಜಿ ರಾವ್ ನಿಧನ, ಎಐಎಫ್ಎಫ್ ಸಂತಾಪ
ಕೃಷ್ಣಾಜೀ ರಾವ್
Published On :

ನವದೆಹಲಿ: ಭಾರತ ಫುಟ್ಬಾಲ್ ತಂಡದ ಮಾಜಿ ಮಿಡ್‌ಫೀಲ್ಡರ್ ಮತ್ತು ತರಬೇತುದಾರ ಕೃಷ್ಣಾಜಿ ರಾವ್ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕೃಷ್ಣಾಜಿ ರಾವ್ ನಿಧನಕ್ಕೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ(ಎಐಎಫ್‌ಎಫ್‌) ಸಂತಾಪ ಸೂಚಿಸಿದೆ.

ಕೃಷ್ಣಾಜೀ ರಾವ್ 1966 ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಹಿರಿಯರ ತಂಡಕ್ಕೆ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು.

ಇನ್ನು 1967 ರಂಗೂನ್(ಈಗ ಯಾಂಗೂನ್) ನಲ್ಲಿ ನಡೆದ ಏಷ್ಯನ್ ಕಪ್ ಅರ್ಹತಾ ಪಂದ್ಯಗಳಲ್ಲಿ ಮತ್ತು 1968 ರ ಕೌಲಾಲಂಪುರದಲ್ಲಿ ನಡೆದ ಮೆರ್ಡೆಕಾ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದರು, ಇದರಲ್ಲಿ ಅವರು ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.