ಬೆಳ್ಳಿ ಪದಕ ವಿಜೇತ ರವಿಕುಮಾರ್ ದಹಿಯಾಗೆ 4 ಕೋಟಿ ನಗದು ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಕೊರಳೇರಿಸಿಕೊಂಡ ಕುಸ್ತಿಪಟು ರವಿಕುಮಾರ್ ದಹಿಯಾಗೆ ಹರಿಯಾಣ ಸರ್ಕಾರ ಭಾರಿ ಬಹುಮಾನ ಘೋಷಿಸಿದೆ.

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಕೊರಳೇರಿಸಿಕೊಂಡ ಕುಸ್ತಿಪಟು ರವಿಕುಮಾರ್ ದಹಿಯಾಗೆ ಹರಿಯಾಣ ಸರ್ಕಾರ ಭಾರಿ ಬಹುಮಾನ ಘೋಷಿಸಿದೆ.
ತಮ್ಮ ರಾಜ್ಯದವರಾದ ರವಿಕುಮಾರ್ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಸಂದರ್ಭದಲ್ಲಿ ಅವರಿಗೆ 4 ಕೋಟಿ ರೂಪಾಯಿ ನಗದು ಬಹುಮಾನ. ಕ್ಲಾಸ್ 1 ದರ್ಜೆಯ ಉದ್ಯೋಗ ನೀಡಲಾಗುವುದು ಸರ್ಕಾರ ಪ್ರಕಟಿಸಿದೆ.
ರಾಜ್ಯದ ಯಾವುದೇ ಭಾಗದಲ್ಲಿ ಶೇ. 50ರಷ್ಟು ರಿಯಾಯಿತಿಯೊಂದಿಗೆ ಒಂದು ಪ್ಲಾಟ್ ನೀಡಲಾಗುವುದು ಎಂದು ಘೋಷಿಸಿದೆ. ಅಲ್ಲದೆ, ರವಿ ಅವರ ಗ್ರಾಮ ನಹ್ರಿಯಲ್ಲಿ ಕುಸ್ತಿ ತರಬೇತಿಗಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವುದಾಗಿ ಹರಿಯಾಣ ಸರ್ಕಾರ ಹೇಳಿದೆ.
ರಜತ ಪದಕ ವಿಜೇತ ರವಿ ಕುಮಾರ್ ದಹಿಯಾ ಅವರ ಸಾಧನೆಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ದಹಿಯಾ ಅವರ ಸಾಧನೆ ನೋಡಿ ದೇಶ ಹೆಮ್ಮೆಪಡುತ್ತಿದೆ ಎಂದು ಕೊಂಡಾಡಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಪದಕ ಗೆದ್ದು ತಂದ ನಿಜವಾದ ಚಾಂಪಿಯನ್ ಆಗಿದ್ದೀರಿ ಎಂದು ರಾಷ್ಟ್ರಪತಿ ಕೊಂಡಾಡಿದ್ದಾರೆ.
ರವಿಕುಮಾರ್ ದಹಿಯಾ ಅದ್ಭುತ ಕುಸ್ತಿಪಟು ಎಂದು ಪ್ರಧಾನಿ ಕೊಂಡಾಡಿದ್ದು, ಅವರ ಸ್ಫೂರ್ತಿದಾಯಕ ಪ್ರದರ್ಶನ ಮಹತ್ವದ್ದು ಎಂದು ಉಲ್ಲೇಖಿಸಿದ್ದಾರೆ. ಬೆಳ್ಳಿ ಗೆದ್ದ ರವಿ ಅವರಿಗೆ ಸೆಲೆಬ್ರಿಟಿಗಳು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


