ಕ್ರೀಡೆ

ಪುರುಷರ ಸಿಂಗಲ್ಸ್ ಯುಸ್ ಓಪನ್ ಟೆನಿಸ್ ಗ್ರಾಂಡ್ ಸ್ಲಾಮ್ ಕಿರೀಟ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಪಾಲು 

ಇಲ್ಲಿನ ಅರ್ತುರ್ ಅಸೆ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಪುರುಷರ ಸಿಂಗಲ್ಸ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಟ್ರಿಯಾದ ಆಟಗಾರ ಡೊಮಿನಿಕ್ ಥೀಮ್ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

ಪುರುಷರ ಸಿಂಗಲ್ಸ್ ಯುಸ್ ಓಪನ್ ಟೆನಿಸ್ ಗ್ರಾಂಡ್ ಸ್ಲಾಮ್ ಕಿರೀಟ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಪಾಲು 
ಯುಎಸ್ ಗ್ರಾಂಡ್ ಸ್ಲಾಂ ಗೆದ್ದ ಆಸ್ಟ್ರಿಯಾದ ಡೊಮಿನಿಕ್ ಥೀಮ್
Published On :

ನ್ಯೂಯಾರ್ಕ್: ಇಲ್ಲಿನ ಅರ್ತುರ್ ಅಸೆ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಪುರುಷರ ಸಿಂಗಲ್ಸ್ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಟ್ರಿಯಾದ ಆಟಗಾರ ಡೊಮಿನಿಕ್ ಥೀಮ್ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದು ಬೀಗಿದ್ದಾರೆ.

27 ವರ್ಷದ ಡೊಮಿನಿಕ್ ಥೀಮ್ ಅವರು 23 ವರ್ಷದ ಅಲೆಕ್ಸಾಂಡರ್ ಅವರನ್ನು 2-6, 4-6, 6-4, 6-3, 7-6 ಸೆಟ್ ಗಳಿಂದ ಸತತ ನಾಲ್ಕು ಗಂಟೆಗಳಿಗೂ ಅಧಿಕ ಕಾಲ ಆಡಿ ತಮ್ಮ ಮೊದಲ ಚಾಂಪಿಯನ್ ಷಿಪ್ ನ್ನು ಗೆದ್ದು ಬೀಗಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಟೆನಿಸ್ ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಪ್ರವೇಶ ಇರಲಿಲ್ಲ. 

ಇನ್ನು ಮೊನ್ನೆ, ಯುಎಸ್ ಮುಕ್ತ ಟೆನಿಸ್ ನ ಮಹಿಳೆಯರ ಸಿಂಗಲ್ಸ್ ಅಂತಿಮ ಪಂದ್ಯದಲ್ಲಿ ಬೆಲಾರಸ್ ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸುವ ಮೂಲಕ ಜಪಾನ್ ನ ನವೋಮಿ ಒಸಾಕಾ ಸತತ ಮೂರನೇ ಬಾರಿಗೆ ಗ್ರಾಂಡ್ ಸ್ಲಾಮ್ ಕಿರೀಟವನ್ನು ಗೆದ್ದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.