ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್ :3ನೇ ಬಾರಿ ಗ್ರಾಂಡ್ ಸ್ಲಾಂ ಕಿರೀಟ ಗೆದ್ದ ಜಪಾನ್ ನ ನವೋಮಿ ಒಸಾಕಾ
ಯುಎಸ್ ಮುಕ್ತ ಟೆನಿಸ್ ನ ಮಹಿಳೆಯರ ಸಿಂಗಲ್ಸ್ ಅಂತಿಮ ಪಂದ್ಯದಲ್ಲಿ ಬೆಲಾರಸ್ ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸುವ ಮೂಲಕ ಜಪಾನ್ ನ ನವೋಮಿ ಒಸಾಕಾ ಸತತ ಮೂರನೇ ಬಾರಿಗೆ ಗ್ರಾಂಡ್ ಸ್ಲಾಮ್ ಕಿರೀಟವನ್ನು ಗೆದ್ದಿದ್ದಾರೆ.

ನ್ಯೂಯಾರ್ಕ್: ಯುಎಸ್ ಮುಕ್ತ ಟೆನಿಸ್ ನ ಮಹಿಳೆಯರ ಸಿಂಗಲ್ಸ್ ಅಂತಿಮ ಪಂದ್ಯದಲ್ಲಿ ಬೆಲಾರಸ್ ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಸೋಲಿಸುವ ಮೂಲಕ ಜಪಾನ್ ನ ನವೋಮಿ ಒಸಾಕಾ ಸತತ ಮೂರನೇ ಬಾರಿಗೆ ಗ್ರಾಂಡ್ ಸ್ಲಾಮ್ ಕಿರೀಟವನ್ನು ಗೆದ್ದಿದ್ದಾರೆ.
1994ರ ನಂತರ ಯುಎಸ್ ಓಪನ್ ಸಿಂಗಲ್ಸ್ ಅಂತಿಮ ಪಂದ್ಯವನ್ನು ಗೆದ್ದ ಮೊದಲ ಮಹಿಳೆಯಾಗಿದ್ದಾರೆ. ವಿಶ್ವ ಟೆನ್ನಿಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಚೀನಾದ ಲಿ ನಾ ಅವರ ಎರಡು ಗ್ರಾಂಡ್ ಸ್ಲಾಂ ಪ್ರಶಸ್ತಿಯನ್ನು ಹಿಂದಿಕ್ಕಿ ಮೂರು ಗ್ರಾಂಡ್ ಸ್ಲಾಂ ಪ್ರಶಸ್ತಿ ಗಳಿಸಿದ ಏಷ್ಯಾ ಖಂಡದ ಮೊದಲ ಆಟಗಾರ್ತಿಯಾಗಿದ್ದಾರೆ.
ನ್ಯೂಯಾರ್ಕ್ ನ ಅರ್ತುರ್ ಅಶೆ ಕ್ರೀಡಾಂಗಣದಲ್ಲಿ ನಿನ್ನೆ ಮುಕ್ತಾಯವಾದ ಪಂದ್ಯದಲ್ಲಿ ಒಸಾಕಾ ಅವರು ಅಜರೆಂಕಾ ಅವರನ್ನು 1-6,6-3,6-3 ಸೆಟ್ ಗಳಿಂದ ಮಣಿಸಿದ್ದಾರೆ.
ಒಸಾಕಾ ಅವರು ಈ ಹಿಂದೆ 2018ರಲ್ಲಿ ಅಮೆರಿಕ ಮುಕ್ತ ಮತ್ತು 2019ರಲ್ಲಿ ಆಸ್ಟ್ರೇಲಿಯಾ ಮುಕ್ತ ಟೆನಿಸ್ ಸರಣಿಯನ್ನು ಸಹ ಗೆದ್ದಿದ್ದರು. ನಾನು ಪಂದ್ಯವನ್ನು ಸಂತೋಷದಿಂದ ಅನುಭವಿಸಲಿಲ್ಲ, ಇದು ನಿಜಕ್ಕೂ ಕಠಿಣ ಸವಾಲಿನ ಪಂದ್ಯವಾಗಿತ್ತು ಎಂದು 1 ಗಂಟೆ 53 ನಿಮಿಷಗಳ ಕಾಲ ಆಡಿ ಗೆದ್ದ ನಂತರ ಒಸಾಕಾ ಪ್ರತಿಕ್ರಿಯೆ ನೀಡಿದ್ದಾರೆ.
ಎರಡು ಬಾರಿಯ ಗ್ರಾಂಡ್ ಸ್ಲಾಂ ವಿಜೇತೆ ಅಜರೆಂಕಾ 2013ರಲ್ಲಿ ಯುಎಸ್ ಓಪನ್ ಟೆನಿಸ್ ನ್ನು ಸೆರೆನಾ ವಿಲಿಯಮ್ಸ್ ಜೊತೆ ಆಡಿದ ನಂತರ ಅತಿದೊಡ್ಡ ಅಂತಿಮ ಪಂದ್ಯದಲ್ಲಿ ಈ ಬಾರಿ ಆಡಿದ್ದಾರೆ.

ಪ್ರಶಸ್ತಿಯು 30 ದಶಲಕ್ಷ ಡಾಲರ್ ನಗದು ಬಹುಮಾನ ಮತ್ತು ಫಲಕವನ್ನು ಒಳಗೊಂಡಿದೆ. ಆರಂಭದಲ್ಲಿ ಅಜರೆಂಕಾ ಅವರು ಮೊದಲ ಸೆಟ್ ನಲ್ಲಿ ಮುಂಚೂಣಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


