ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಕ್ವಾರಂಟೈನ್
ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ಅಂಗರಕ್ಷಕರಲ್ಲಿ ಕೋವಿಡ್-19 ಚಿಹ್ನೆಗಳನ್ನು ಕಂಡು ಬಂದ ನಂತರ ಕ್ವಾರಂಟೈನ್‌ನಲ್ಲಿರಲು ತಮ್ಮ ಮನೆಗೆ ತೆರಳಿದ್ದಾರೆ.

ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ಅಂಗರಕ್ಷಕರಲ್ಲಿ ಕೋವಿಡ್-19 ಚಿಹ್ನೆಗಳನ್ನು ಕಂಡು ಬಂದ ನಂತರ ಕ್ವಾರಂಟೈನ್‌ನಲ್ಲಿರಲು ತಮ್ಮ ಮನೆಗೆ ತೆರಳಿದ್ದಾರೆ.
ಮರಡೋನಾದ ಪತ್ರಿಕಾ ವಕ್ತಾರ ಈ ಮಾಹಿತಿಯನ್ನು ನೀಡಿದ್ದಾರೆ. ಮರಡೋನಾ ಅವರ ಅಂಗರಕ್ಷಕನಿಗೆ ಕೋವಿಡ್ -19 ಇದೆಯೇ ಅಥವಾ ಇಲ್ಲವೇ ಎಂದು ಗುರುವಾರ ಪರೀಕ್ಷಿಸಲಾಗುವುದು. ಬಾಡಿಗಾರ್ಡ್ ಅವರಿಗೆ ಸೋಂಕು ಇದ್ದದ್ದಾಗಿ ತಿಳಿದು ಬಂದಲ್ಲಿ, ಮರೋಡೋನಾ ಅವರಿಗೆ ಕರೋನಾ ಇದೆಯೇ ಎಂದು ನೋಡಲು ಸಹ ಟೆಸ್ಟ್ ಮಾಡಲಾಗುತ್ತದೆ.
ಪರೀಕ್ಷಾ ಫಲಿತಾಂಶಗಳು ತಿಳಿಯುವವರೆಗೂ ಅವರು ಹೋಂ ಕ್ವಾರಂಟೈನ್ ನಲ್ಲಿರಲಿದ್ದಾರೆ ಇನ್ನೂ ಸಜ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ಗುರುತಿಸಲಾಗಿಲ್ಲ ಎನ್ನಲಾಗಿದೆ. ಇದೇ ವೇಳೆ ಫುಟ್ಬಾಲ್ ದಂತಕಥೆ ಮರಡೋನಾ ಶುಕ್ರವಾರ 60ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ/
ಅರ್ಜೆಂಟೀನಾದ ಚಾಂಪಿಯನ್‌ಶಿಪ್ ಈ ವಾರ ಪುನರಾರಂಭಗೊಳ್ಳಲಿದೆ. ಸಾಂಕ್ರಾಮಿಕ ರೋಗದಿಂದಾಗಿ ಮಾರ್ಚ್‌ನಲ್ಲಿ ಇದು ಮುಂದೂಡಲ್ಪಟ್ಟಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


