ಕ್ರೀಡೆ

ಫ್ರೆಂಚ್ ಓಪನ್: ಜಾಕೋವಿಕ್ ವಿರುದ್ಧ ನಡಾಲ್ ಗೆ ರೋಚಕ ಜಯ, 20ನೇ ಗ್ರಾಂಡ್ ಸ್ಲಾಮ್ ಗೆಲುವಿನ ಮೂಲಕ ಶತಕ ಸಾಧನೆ ಮಾಡಿದ ರಾಫಾ!

ಸ್ಪೈನ್ ನ ರಾಫೆಲ್ ನಡಾಲ್ ಮತ್ತೆ ಫ್ರೆಂಚ್ ಓಪನ್ ಪ್ರಶಸ್ತಿ ಕಿರೀಟಕ್ಕೆ ಮುತ್ತಿಟ್ಟಿದ್ದು, ಫೈನಲ್ ನಲ್ಲಿ ಬಲಿಷ್ಠ ನುವಾಕ್ ಜೋಕೋವಿಕ್ ವಿರುದ್ಧ ವಿರೋಚಿತ ಗೆಲುವು ಸಾಧಿಸಿದ್ದಾರೆ.

ಫ್ರೆಂಚ್ ಓಪನ್: ಜಾಕೋವಿಕ್ ವಿರುದ್ಧ ನಡಾಲ್ ಗೆ ರೋಚಕ ಜಯ, 20ನೇ ಗ್ರಾಂಡ್ ಸ್ಲಾಮ್ ಗೆಲುವಿನ ಮೂಲಕ ಶತಕ ಸಾಧನೆ ಮಾಡಿದ ರಾಫಾ!
ಪ್ರಶಸ್ತಿ ಗೆದ್ದ ರಾಫೆಲ್ ನಡಾಲ್
Published On :

ಪ್ಯಾರಿಸ್: ಸ್ಪೈನ್ ನ ರಾಫೆಲ್ ನಡಾಲ್ ಮತ್ತೆ ಫ್ರೆಂಚ್ ಓಪನ್ ಪ್ರಶಸ್ತಿ ಕಿರೀಟಕ್ಕೆ ಮುತ್ತಿಟ್ಟಿದ್ದು, ಫೈನಲ್ ನಲ್ಲಿ ಬಲಿಷ್ಠ ನುವಾಕ್ ಜೋಕೋವಿಕ್ ವಿರುದ್ಧ ವಿರೋಚಿತ ಗೆಲುವು ಸಾಧಿಸಿದ್ದಾರೆ.

ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ನಡಾಲ್, ಜಾಕೋವಿಕ್ ವಿರುದ್ಧ 6-0, 6-2, 7-5 ನೇರ ಸೆಟ್ ಗಳ ಅಂತರದ ಗೆಲುವು ಸಾಧಿಸಿದರು. ಆ ಮೂಲಕ ತಮ್ಮ ವೃತ್ತಿ ಜೀವನದ 20 ಗ್ರಾಂಡ್ ಸ್ಲಾಮ್ ಗೆದ್ದರು. ಇದು ನಡಾಲ್ ಗೆ ಟೆನ್ನಿಸ್ ವತ್ತಿ ಜೀವನದ 100ನೇ ಗೆಲುವಾಗಿದೆ. 

2005ರಿಂದ ಈ ಟೂರ್ನಿಯಲ್ಲಿ ಆಡುತ್ತಿರುವ ನಡಾಲ್‌ಗೆ ಇದು 100ನೇ ಗೆಲುವಾಗಿದ್ದು ಆ ಮೂಲಕ 34 ವರ್ಷದ ನಡಾಲ್ ಗೆಲುವಿನ ಶತಕ ಭಾರಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಫೆಡರರ್ ಈ ವರೆಗೆ 20 ಗ್ರ್ಯಾಂಡ್  ಸ್ಲಾಂ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಫ್ರೆಂಚ್ ಓಪನ್‌ನ ಈ ಆವೃತ್ತಿಯಲ್ಲಿ ಒಂದು ಸೆಟ್‌ ಕೂಡ ಸೋಲದ ನಡಾಲ್ ಅವರಿಗೆ ಇದು ಪ್ರಮುಖ ಟೂರ್ನಿಯೊಂದರ 28ನೇ ಫೈನಲ್ ಆಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.