ಕೇಂದ್ರ ಸರ್ಕಾರದಿಂದ 500 ಖಾಸಗಿ ಕ್ರೀಡಾ ಅಕಾಡೆಮಿಗಳಿಗೆ ಪ್ರೋತ್ಸಾಹ ಧನ
ಕೇಂದ್ರ ಕ್ರೀಡಾ ಸಚಿವಾಲಯ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ 2020-21ನೇ ಹಣಕಾಸು ವರ್ಷದಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ 500 ಖಾಸಗಿ ಕ್ರೀಡಾ ಅಕಾಡೆಮಿಗಳಿಗೆ ಆರ್ಥಿಕ ನೆರವು ನೀಡಲು ಹೊಸ ಪ್ರೋತ್ಸಾಹಕರ ಯೋಜನೆಯನ್ನು ಪರಿಚಯಿಸಿದೆ.

ನವದೆಹಲಿ: ಕೇಂದ್ರ ಕ್ರೀಡಾ ಸಚಿವಾಲಯ ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ 2020-21ನೇ ಹಣಕಾಸು ವರ್ಷದಿಂದ ಮುಂದಿನ ನಾಲ್ಕು ವರ್ಷಗಳ ಅವಧಿಗೆ 500 ಖಾಸಗಿ ಕ್ರೀಡಾ ಅಕಾಡೆಮಿಗಳಿಗೆ ಆರ್ಥಿಕ ನೆರವು ನೀಡಲು ಹೊಸ ಪ್ರೋತ್ಸಾಹಕರ ಯೋಜನೆಯನ್ನು ಪರಿಚಯಿಸಿದೆ.
ಈ ಯೋಜನೆಯಡಿ ಅಕಾಡೆಮಿಗಳಲ್ಲಿ ತರಬೇತಿ ಪಡೆದ ಆಟಗಾರರ ಸಾಧನೆಯ ಗುಣಮಟ್ಟ, ಲಭ್ಯವಿರುವ ಕೋಚ್ ಗಳ ಗುಣಮಟ್ಟ, ಯಾವ ಕ್ಷೇತ್ರದಲ್ಲಿ ಗುಣಮಟ್ಟವಿದೆ ಮತ್ತು ಲಭ್ಯವಿರುವ ಮೂಲಸೌಕರ್ಯ ಹಾಗೂ ಕ್ರೀಡಾ ವಿಜ್ಞಾನ ಸೌಕರ್ಯ ಮತ್ತು ಸಿಬ್ಬಂದಿ ಆಧರಿಸಿ ನಾನಾ ವಿಭಾಗಗಳನ್ನಾಗಿ ಶ್ರೇಣೀಕರಿಸಲಾಗುವುದು.
ಅದರಲ್ಲಿ 2028ರ ಒಲಿಂಪಿಕ್ಸ್ ಗೆ ಆಯ್ಕೆ ಮಾಡಿರುವ 14 ಕ್ರೀಡಾ ವಿಭಾಗಗಳಲ್ಲಿ ಆಯ್ಕೆಯಾಗಿರುವ ಕ್ರೀಡೆಗಳ ಅಕಾಡೆಮಿಗಳು ಮೊದಲ ಹಂತದಲ್ಲಿ ಆರ್ಥಿಕ ನೆರವಿಗೆ ಅರ್ಹವಾಗಿರುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


