ಫಿಫಾ 2022: ವಿಶ್ವಕಪ್ ಫುಟ್ಬಾಲ್ ರಾಯಭಾರಿಗೂ ಕೊರೋನಾ ಸೋಂಕು!
2022ರ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್‌ನ ರಾಯಭಾರಿ ಆದೆಲ್ ಖಾಮಿಸ್ ಕೊರೊನಾ ವೈರಸ್‌ಗೆ ಸೋಂಕಿತರಾಗಿದ್ದಾರೆ. ಕೋವಿಡ್ 19 ಪರೀಕ್ಷೆಯಲ್ಲಿ ಆದೆಲ್ ಖಾಮಿಸ್ ಪಾಸಿಟಿವ್ ಬಂದಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ

ದೋಹಾ: 2022ರ ಕತಾರ್‌ನಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್‌ನ ರಾಯಭಾರಿ ಆದೆಲ್ ಖಾಮಿಸ್ ಕೊರೊನಾ ವೈರಸ್‌ಗೆ ಸೋಂಕಿತರಾಗಿದ್ದಾರೆ. ಕೋವಿಡ್ 19 ಪರೀಕ್ಷೆಯಲ್ಲಿ ಆದೆಲ್ ಖಾಮಿಸ್ ಪಾಸಿಟಿವ್ ಬಂದಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಕತಾರ್‌ನ ನಿವೃತ್ತ ಮಿಡ್ ಫೀಲ್ಡರ್ ಆಗಿರುವ ಆದೆಲ್ ಖಾಸಿಮ್‌ಗೆ 54 ವರ್ಷ ವಯಸ್ಸಾಗಿದ್ದು, "ದುದೃಷ್ಟವಶಾತ್ ಆದೆಲ್ ಖಾಸಿಮ್ ಅವರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಶೀಘ್ರದಲ್ಲಿ ಅವರು ಚೇತರಿಸಿಕೊಳ್ಳಲಿ ಎಂದು 2022ರ ಸರ್ವೋಚ್ಛ ಆಯೋಜನಾ ಸಮಿತಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದೆ.
ಆದೆಲ್ ಖಾಸಿಮ್ 2022ರ ಫುಟ್ಬಾಲ್ ವಿಶ್ವಕಪ್‌ನ ಪ್ರಮುಖ ಆಕರ್ಷಣೆಯಾಗಿದ್ದಾರೆ. ಫುಟ್ಬಾಲ್ ವಿಶ್ವಕಪ್‌ಗೆ ಸಿದ್ಧಗೊಳ್ಳುತ್ತಿರುವ 3 ಸ್ಟೇಡಿಯಮ್‌ಗಳಲ್ಲಿ ಕರ್ತವ್ಯದಲ್ಲಿರುವ ಹಲವಾರು ಮಂದಿ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


