ಇಂಡಿಯನ್ ಸೂಪರ್ ಲೀಗ್: ಚೆನ್ನೈ ಮಣಿಸಿದ ಕೋಲ್ಕತಗೆ ಮೂರನೇ ಬಾರಿ ಪ್ರಶಸ್ತಿ
ಚೆನ್ನೈಯಿನ್ ಎಫ್ಸಿ ತಂಡವನ್ನು 3-1 ಗೋಲುಗಳಿಂದ ಮಣಿಸಿದ ಅಟ್ಲೆಟಿಕೊ ಡಿ ಕೋಲ್ಕತ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಕ್ರೀಡಾಕುಟದಲ್ಲಿ ದಾಖಲೆಯ ಮೂರನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಗೋವಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ಸ್ ನಲ್ಲಿ ಕೋಲ್ಕತ್ತಾ ತಂಡ ಈ ಸಾಧನೆ ಮಾಡಿದೆ.

ಫಟೋರ್ಡಾ: ಚೆನ್ನೈಯಿನ್ ಎಫ್ಸಿ ತಂಡವನ್ನು 3-1 ಗೋಲುಗಳಿಂದ ಮಣಿಸಿದ ಅಟ್ಲೆಟಿಕೊ ಡಿ ಕೋಲ್ಕತ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಕ್ರೀಡಾಕುಟದಲ್ಲಿ ದಾಖಲೆಯ ಮೂರನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಗೋವಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ಸ್ ನಲ್ಲಿ ಕೋಲ್ಕತ್ತಾ ತಂಡ ಈ ಸಾಧನೆ ಮಾಡಿದೆ.
ಕೋಲ್ಕತ್ತಾ ಪರವಾಗಿ ಜೇವಿಯರ್ ಹೆರ್ನಾಂಡೆಜ್ ಎರಡು, (10, 93ನೇ ನಿಮಿಷ). ಎಡು ಗಾರ್ಸಿಯ ಒಂದು (48ನೇ ನಿಮಿಷದ) ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದಾರೆ.
ಚೆನ್ನೈ ಪರವಾಗಿ ನೆರಿಜಸ್ ವಾಲ್ಸಿಸ್ ( 69ನೇ ನಿಮಿಷ) ಗೋಲು ದಾಖಲಿಸಿದ್ದಾರೆ.
ಕೊರೋನಾವೈರಸ್ ಭೀತಿಯಿಂದಾಗಿ ಫೈನಲ್ಸ್ ಪಂದ್ಯವನ್ನು ಮುಚ್ಚಿದ ಬಾಗಿಲಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


