ಕ್ರೀಡೆ

ಬಾಕ್ಸಿಂಗ್: ಭರ್ಜರಿ ಗೆಲುವಿನೊಡನೆ ಟೊಕಿಯೋ ಟಿಕೆಟ್ ಗಿಟ್ಟಿಸಿದ ಮೇರಿ ಕೋಮ್

ಆರು ಬಾರಿಯ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ) ಸೋಮವಾರ ನಡೆದ ಬಾಕ್ಸಿಂಗ್ ಹಣಾಹಣಿಯಲ್ಲಿ ಫಿಲಿಪೈನ್ಸ್ ಐರಿಶ್ ಮ್ಯಾಗ್ನೊ ವಿರುದ್ಧ ಸುಲಭ ಗೆಲುವು ಸಾಧಿಸುವುದರೊಡನೆ ಏಷ್ಯನ್ ಕ್ವಾಲಿಫೈಯರ್ಸ್ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಇದೇ ವೇಳೆ ಮೇರಿ ಕೋಮ್ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಬಾಕ್ಸಿಂಗ್: ಭರ್ಜರಿ ಗೆಲುವಿನೊಡನೆ ಟೊಕಿಯೋ ಟಿಕೆಟ್ ಗಿಟ್ಟಿಸಿದ ಮೇರಿ ಕೋಮ್
ಮೇರಿ ಕೋಮ್
Published On :

ಅಮ್ಮನ್(ಜೋರ್ಡಾನ್):  ಆರು ಬಾರಿಯ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ) ಸೋಮವಾರ ನಡೆದ ಬಾಕ್ಸಿಂಗ್ ಹಣಾಹಣಿಯಲ್ಲಿ ಫಿಲಿಪೈನ್ಸ್ ಐರಿಶ್ ಮ್ಯಾಗ್ನೊ ವಿರುದ್ಧ ಸುಲಭ ಗೆಲುವು ಸಾಧಿಸುವುದರೊಡನೆ ಏಷ್ಯನ್ ಕ್ವಾಲಿಫೈಯರ್ಸ್ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಇದೇ ವೇಳೆ ಮೇರಿ ಕೋಮ್ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಜೋರ್ಡಾನ್ ನ ಅಮ್ಮನ್ ನಲ್ಲಿ ನಡೆದ ಕ್ವಾರಟರ್ ಫೈನಲ್ಸ್ ಪಂದ್ಯದಲ್ಲಿ ಕೋಮ್  5-0 ಅಂತರದಲ್ಲಿ ಗೆಲುವು ಸಾಧಿಸಿದರು.

37ರ ಹರೆಯದ ಬಾಕ್ಸರ್ ಮೇರಿ  ಮಹಿಳೆಯರ ಬಾಕ್ಸಿಂಗ್ ಅನ್ನು ಮೊದಲ ಬಾರಿಗೆಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸೇರ್ಪಡಿಸಿದ್ದ  2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಸಾಧನೆ ಮೆರೆದಿದ್ದಾರೆ. 

ಮೇರಿ ತಮ್ಮ ಮುಂದಿನ ಸೆಮೀಸ್ ಹಣಾಹಣಿಯಲ್ಲಿ  ಚೀನಾದ ಯುವಾನ್ ಚಾಂಗ್ ವಿರುದ್ಧ ಸೆಣಸಲಿದ್ದಾರೆ. ಚಾಂಗ್ ಮಾಜಿ ಯುವ ಒಲಿಂಪಿಕ್ಸ್ ಚಾಂಪಿಯನ್ ಆದ್ಗಿದ್ದಾರೆ.

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.