ಗಾಲ್ಫ್ ಆಟಗಾರನಿಗೆ ಕೊರೋನಾ ಸೋಂಕು: ಕರ್ನಾಟಕ ಗಾಲ್ಫ್ ಕ್ಲಬ್ ಬಂದ್
ಗಾಲ್ಫ್ ಪಟುವೊಬ್ಬರಿಗೆ ಕೋವಿಡ್ –19 ಸೋಂಕು ಇರುವುದು ಖಚಿತವಾಗಿದ್ದು ಕರ್ನಾಟಕ ಗಾಲ್ಫ್ ಸಂಸ್ಥೆಯ (ಕೆಜಿಎ) ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ

ಬೆಂಗಳೂರು: ಗಾಲ್ಫ್ ಪಟುವೊಬ್ಬರಿಗೆ ಕೋವಿಡ್ –19 ಸೋಂಕು ಇರುವುದು ಖಚಿತವಾಗಿದ್ದು ಕರ್ನಾಟಕ ಗಾಲ್ಫ್ ಸಂಸ್ಥೆಯ (ಕೆಜಿಎ) ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸೋಂಕಿತ ಗಾಲ್ಪ್ ಆಟಗಾರ ಜೂನ್ 13ರಂದು ಕೆಜಿಎ ಕೋರ್ಸ್‌ನಲ್ಲಿ ಆಡಿದ್ದರು. ಆದ್ದರಿಂದ ಕ್ಲಬ್ ಪ್ರದೇಶವನ್ನು ಸಂಪೂರ್ಣವಾಗಿ ಸೋಂಕುರಹಿತವನ್ನಾಗಿ ಮಾಡುವವರೆಗೆ ಕೆಜಿಎ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
‘ಇಲ್ಲಿ ಆಡುವ ನಮ್ಮ ಸದಸ್ಯರೊಬ್ಬರಿಗೆ ಕೋವಿಡ್ ಸೋಂಕು ಇರುವ ಕುರಿತು ಮಂಗಳವಾರ ಮಾಹಿತಿ ಲಭಿಸಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಅವರು ಬೇಗನೆ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ನಮ್ಮಲ್ಲಿ ಆರಂಭದಿಂದಲೂ ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದೇವೆ. ಸರ್ಕಾರದ ನಿಯಮಗಳಂತೆ ಎಲ್ಲವನ್ನೂ ಪಾಲಿಸಿದ್ದೇವೆ’ ಎಂದು ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಕಾರದ ಎಲ್ಲ ನಿರ್ದೇಶನಗಳನ್ನೂ ನಾವು ಪಾಲಿಸುತ್ತಿದ್ದೇವೆ. ಸ್ಯಾನಿಟೈಸಿಂಗ್ ಕೆಲಸ ಆರಂಭವಾಗಿದೆ. ಇನ್ನು ಕೆಲವು ದಿನಗಳಲ್ಲಿ ಮುಗಿಯುತ್ತದೆ. ಎಲ್ಲ ಆಟಗಾರರ ದಾಖಲೆಗಳನ್ನು ನಿರ್ವಹಣೆ ಮಾಡಿದ್ದೇವೆ. ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಎಲ್ಲ ರೀತಿಯಿಂದ ಸಹಕರಿಸುತ್ತೇವೆ’ ಎಂದು ಹೇಳಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


