ಈ ದೇಶವೇ ಒಂದು ದೊಡ್ಡ ಜೋಕ್: ಅರ್ಜುನ ಪ್ರಶಸ್ತಿ ಅವ್ಯವಸ್ಥೆ ಬಗ್ಗೆ ಎಚ್ಎಸ್ ಪ್ರಣೋಯ್ ಆಕ್ರೋಶ
ಸತತ ಎರಡನೇ ವರ್ಷವೂ ಅರ್ಜುನ ಪ್ರಶಸ್ತಿಗೆ ತಮ್ಮ ಹೆಸರು ಶಿಫಾರಸು ಮಾಡದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಎಚ್ ಎಸ್ ಪ್ರಣೋಯ್ ಅವರು, ಈ ದೇಶವೇ ಒಂದು ದೊಡ್ಡ ಜೋಕ್ ಎಂದು ಟ್ವೀಟ್ ಮಾಡಿದ್ದಾರೆ.

ನವದೆಹಲಿ: ಸತತ ಎರಡನೇ ವರ್ಷವೂ ಅರ್ಜುನ ಪ್ರಶಸ್ತಿಗೆ ತಮ್ಮ ಹೆಸರು ಶಿಫಾರಸು ಮಾಡದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಎಚ್ ಎಸ್ ಪ್ರಣೋಯ್ ಅವರು, ಈ ದೇಶವೇ ಒಂದು ದೊಡ್ಡ ಜೋಕ್ ಎಂದು ಟ್ವೀಟ್ ಮಾಡಿದ್ದಾರೆ.
ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ(ಬಿಎಐ) ನಿನ್ನೆಯಷ್ಟೇ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಹಾಗೂ ಪುರುಷರ ಸಿಂಗಲ್ಸ್ ಆಟಗಾರ ಸಮೀರ್ ವರ್ಮಾ ಅವರನ್ನು ಅರ್ಜುನ ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ.
ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಣೋಯ್, ಅರ್ಜುನ ಪ್ರಶಸ್ತಿ ಅದೇ ಹಳೆಯ ಕಥೆ. ಕಾಮನ್ವೆಲ್ತ್ ಮತ್ತು ಏಷ್ಯನ್ ಚಾಂಪಿಯನ್ಶಿಪ್ಗಳಲ್ಲಿ ಪದಕ ಗೆದ್ದಿರುವವರನ್ನು ಸಹ ಬಿಐಎ ಶಿಫಾರಸು ಮಾಡಿಲ್ಲ. ಆದರೆ ಯಾವುದೇ ಪ್ರಮುಖ ಪಂದ್ಯಾವಳಿಯಲ್ಲಿ ಭಾಗವಹಿಸಿದ ಆಟಗಾರರ ಹೆಸರನ್ನು ಶಿಫಾರಸು ಮಾಡಿದ್ದಾರೆ. ಈ ದೇಶ ತಮಾಷೆಯಾಗಿದೆ"ಎಂದು ಬರೆದಿದ್ದಾರೆ.
ಬಿಐಎ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿರುವ ಮೂವರು ಆಟಗಾರರ ಪೈಕಿ ಸಾತ್ವಿಕ್, ಚಿರಾಗ್ 2018ರಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆದರೆ ಸಮೀರ್ ಅವರು ಯಾವುದೇ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಡಿಲ್ಲ. ಇದು ಪ್ರಣೋಯ್ ಆಕ್ರೋಶಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


