ಸುನಿಲ್ ಛೆಟ್ರಿ ನಂತರ ಯಾರೂ ಇಲ್ಲದೇ ಇರುವುದು ಆತಂಕಕಾರಿ: ಬೈಚುಂಗ್ ಭುಟಿಯಾ
ಭಾರತೀಯ ಫುಟ್ಬಾಲ್ ನಲ್ಲಿ ಎದುರಾಳಿಗಳಿಗೆ ಆತಂಕ ಉಂಟುಮಾಡಬಲ್ಲ ಜೊತೆಯಾಟಗಾರರು ಇಲ್ಲದಿರುವುದು ನಿರಂತರ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಭಾರತೀಯ ಫುಟ್ಬಾಲ್ ನ ಖ್ಯಾತ ಆಟಗಾರ ಬೈಚುಂಗ್ ಭುಟಿಯಾ ಸಹ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತೀಯ ಫುಟ್ಬಾಲ್ ನಲ್ಲಿ ಎದುರಾಳಿಗಳಿಗೆ ಆತಂಕ ಉಂಟುಮಾಡಬಲ್ಲ ಜೊತೆಯಾಟಗಾರರು ಇಲ್ಲದಿರುವುದು ನಿರಂತರ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಭಾರತೀಯ ಫುಟ್ಬಾಲ್ ನ ಖ್ಯಾತ ಆಟಗಾರ ಬೈಚುಂಗ್ ಭುಟಿಯಾ ಸಹ ಆತಂಕ ವ್ಯಕ್ತಪಡಿಸಿದ್ದಾರೆ.
ಐಎಎನ್ಎಸ್ ಜೊತೆ ಮಾತನಾಡಿರುವ ಬೈಚುಂಗ್ ಭುಟಿಯಾ, ಈಗ ಸುನಿಲ್ ಛೆಟ್ರಿ ಭಾರತ ತಂಡದ ಅತ್ಯುತ್ತಮ ಆಟಗಾರನಾಗಿದ್ದಾರೆ, ಆದರೆ ಅವರ ಜೊತೆಯಾಗಿ ನಿಲ್ಲಬಲ್ಲವರು, ಅಥವಾ ಸುನಿಲ್ ಛೆಟ್ರಿ ನಿವೃತ್ತಿ ಘೋಷಿಸಿದ ಬಳಿಕ ಅವರ ಸ್ಥಾನ ತುಂಬುವಂತಹ ಆಟಗಾರರು ಇಲ್ಲದೇ ಇರುವುದು ಆತಂಕದ ವಿಷಯ ಎಂದು ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ನ ಮಾದರಿಯಲ್ಲಿ ಫುಟ್ಬಾಲ್ ನಲ್ಲಿಯೂ ಮಾಜಿ ಆಟಗಾರರು ಫುಟ್ಬಾಲ್ ಕ್ರೀಡೆಯನ್ನು ಬಲಿಷ್ಠಗೊಳಿಸಲು ಸಹಕರಿಸಬೇಕೆಂದು ಬೈಚುಂಗ್ ಭುಟಿಯಾ ಅಭಿಪ್ರಾಯಪಟ್ಟಿದ್ದಾರೆ.
ಸುನಿಲ್ ಛೆಟ್ರಿ ಅವರೊಂದಿಗೆ ಜೊತೆಯಾಗಬಲ್ಲ ಜೆಜೆ ಲಾಲ್ಪೆಕ್ಲುವಾ ಹಾಗೂ ಬಲ್ವಂತ್ ಸಿಂಗ್ ಸಹ ಗಾಯಾಳುಗಳಾಗಿದ್ದಾರೆ. ಈ ಕಾರಣದಿಂದ ಆ ಇಬ್ಬರು ಆಟಗಾರರಿಗೂ ಸುನಿಲ್ ಛೆಟ್ರಿಗೆ ಸಾಥ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಭುಟಿಯಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


