ಅಂತರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಸುನೀತಾ ಲಕ್ರಾ
ಭಾರತದ ಮಹಿಳಾ ಹಾಕಿ ತಂಡದ ಸ್ಟಾರ್ ಆಟಗಾರ್ತಿ ಸುನೀತಾ ಲಕ್ರಾ ಅವರು ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಗುರುವಾರ ನಿವೃತ್ತಿ ಘೋಷಿಸಿದ್ದಾರೆ.

ನವದೆಹಲಿ: ಭಾರತದ ಮಹಿಳಾ ಹಾಕಿ ತಂಡದ ಸ್ಟಾರ್ ಆಟಗಾರ್ತಿ ಸುನೀತಾ ಲಕ್ರಾ ಅವರು ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಗುರುವಾರ ನಿವೃತ್ತಿ ಘೋಷಿಸಿದ್ದಾರೆ.
2018 ರ ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತ ತಂಡದ ಸದಸ್ಯೆ ಸುನೀತಾ ಅವರಿಗೆ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸುನೀತಾ, "ಇಂದು ನನಗೆ ಬಹಳ ಭಾವನಾತ್ಮಕ ದಿನವಾಗಿದೆ ಮತ್ತು ನಾನು ಅಂತರರಾಷ್ಟ್ರೀಯ ಹಾಕಿಯಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.
2008 ರಿಂದ ರಾಷ್ಟ್ರೀಯ ತಂಡದ ಭಾಗವಾಗಿದ್ದ ಲಕ್ರಾ ತಮ್ಮ ವೃತ್ತಿಜೀವನದಲ್ಲಿ ಅವರು ಭಾರತಕ್ಕಾಗಿ 139 ಪಂದ್ಯಗಳನ್ನು ಆಡಿದ್ದಾರೆ.2014ರ ಏಷ್ಯನ್ ಗೇಮ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ಪಡೆ ಕಂಚು ಗೆದ್ದಿದ್ದು ಆ ತಂಡದ ಸದಸ್ಯರಾಗಿ ಸಹ ಇವರು ಗುರುತಿಸಿಕೊಂಡಿದ್ದರು.
2016 ರಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಆಟಗಾರ್ತಿ ಮುಂದಿನ ಟೋಕಿಯೋ ಒಲಂಪಿಕ್ಸ್ ಗೆ ಮುನ್ನ ಮೊಣಕಾಲಿನ ಗಾಯದಿಂದ ನಿವೃತ್ತಿ ಘೋಷಿಸುವಂತಾಗಿದೆ.
"ಟೋಕಿಯೋ ಒಲಿಂಪಿಕ್ಸ್‌ಭಾರತೀಯ ತಂಡದ ಭಾಗವಾಗಬೇಕೆಂದು ನಾನು ಬಯಸಿದ್ದೆ, ಮೊಣಕಾಲಿನ ಗಾಯಗಳು ನನ್ನ ಕನಸನ್ನು ಚೂರಾಗಿಸಿದೆ. ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ಖಚಿತವಿಲ್ಲ. ಒಮ್ಮೆ ಚೇತರಿಸಿಕೊಂಡ ನಂತರ ದೇಶೀಯ ಹಾಕಿಯಲ್ಲಿ ಮುಂದುವರಿಯುವೆ" ಲಕ್ರಾ ಹೇಳಿದರು.
ತಮ್ಮ ಬೆಂಬಲಿಸಿದ ತಂಡದ ಸದಸ್ಯರು, ಕೋಚ್, ಪ್ರಾಯೋಜಕರು ಸೇರಿ ಎಲ್ಲರಿಗೆ ಲಕ್ರಾ ಧನ್ಯವಾದ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


