ಹಂಗೇರಿಯನ್ ಓಪನ್: ಭಾರತದ ಸತಿಯನ್-ಕಮಲ್ ಜೋಡಿಗೆ ಬೆಳ್ಳಿ ಪದಕ
ಭಾರತದ ಅಚಂತಾ ಕಮಲ್ ಹಾಗೂ ಜಿ. ಸತಿಯನ್ ಜೋಡಿಯು ಇಲ್ಲಿ ನಡೆದ ಐಟಿಟಿಎಫ್ ವಿಶ್ವ ಟೂರ್ ಹಂಗೇರಿಯನ್ ಓಪನ್ ಟೇಬಲ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.

ಬುದಪೆಸ್ಟ್: ಭಾರತದ ಅಚಂತಾ ಕಮಲ್ ಹಾಗೂ ಜಿ. ಸತಿಯನ್ ಜೋಡಿಯು ಇಲ್ಲಿ ನಡೆದ ಐಟಿಟಿಎಫ್ ವಿಶ್ವ ಟೂರ್ ಹಂಗೇರಿಯನ್ ಓಪನ್ ಟೇಬಲ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದೆ.
ಶನಿವಾರ ನಡೆದಿದ್ದ ಫೈನಲ್ ಹಣಾಹಣಿಯಲ್ಲಿ 1-3 ಅಂತರದಲ್ಲಿ 16ನೇ ಶ್ರೇಯಾಂಕಿತ ಜರ್ಮನಿಯ ಬೆನೆಡಿಕ್ತ್ ದುಡಾ ಮತ್ತು ಪ್ಯಾಟ್ರಿಕ್ ಫ್ರಾಂಜಿಸ್ಕಾ ಜೋಡಿಯ ವಿರುದ್ಧ ಭಾರತದ ಜೋಡಿ ಪರಾಭವಗೊಂಡಿತು. ಆ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮುನ್ನ ಸೆಮಿಫೈನಲ್ಸ್ ಹಣಾಹಣಿಯಲ್ಲಿ ಸತಿಯನ್ ಹಾಗೂ ಕಮಲ್ ಜೋಡಿಯು ಅಗ್ರ ಶ್ರೇಯಾಂಕದ ಕ್ವಾನ್ ಕಿಟ್ ಹೊ ಮತ್ತು ಚುನ್ ಟಿಂಗ್ ವಾಂಗ್ ಹಾಂಕಾಂಗ್ ಜೋಡಿಯನ್ನು ಮಣಿಸಿ ಫೈನಲ್ ಪ್ರವೇಶ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


