ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಭಜರಂಗ್ ಪುನಿಯಾ ಸೇರಿದಂತೆ ನಾಲ್ವರು ಫೈನಲ್ ಗೆ
ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸ್ಟಾರ್ ಕುಸ್ತಿಪಟು ಭಜರಂಗ್ ಪುನಿಯಾ, ರವಿ ದಹಿಯಾ ಸೇರಿದಂತೆ ನಾಲ್ವರು ಭಾರತೀಯರು ಶನಿವಾರ ವಿವಿಧ ವಿಭಾಗಗಳಲ್ಲಿ ಫೈನಲ್ ತಲುಪುವ ಮೂಲಕ ಬೆಳ್ಳಿ ಪದಕಗಳನ್ನು ಖಚಿತ ಪಡಿಸಿಕೊಂಡಿದ್ದಾರೆ.

ನವದೆಹಲಿ: ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸ್ಟಾರ್ ಕುಸ್ತಿಪಟು ಭಜರಂಗ್ ಪುನಿಯಾ, ರವಿ ದಹಿಯಾ ಸೇರಿದಂತೆ ನಾಲ್ವರು ಭಾರತೀಯರು ಶನಿವಾರ ವಿವಿಧ ವಿಭಾಗಗಳಲ್ಲಿ ಫೈನಲ್ ತಲುಪುವ ಮೂಲಕ ಬೆಳ್ಳಿ ಪದಕಗಳನ್ನು ಖಚಿತ ಪಡಿಸಿಕೊಂಡಿದ್ದಾರೆ.
ಸತ್ಯವರ್ಥ್ ಕಡಿಯನ್ (97 ಕೆ.ಜಿ) ಹಾಗೂ ಗೌರವ್ ಬಲಿಯನ್ (79 ಕೆ.ಜಿ) ಅವರು ಕೂಡ ಬೆಳ್ಳಿ ಪದಕವನ್ನು ಉಳಿಸಿಕೊಂಡಿದ್ದಾರೆ. ಆದರೆ, ನವೀನ್(70 ಕೆಜಿ) ಅವರು ಸೆಮಿಫೈನಲ್ ಹಣಾಹಣಿಯಲ್ಲಿ ಉಜ್ಬೀಕಿಸ್ತಾನದ ಮಿಹಿರ್‌ಜಾನ್ ಅಶೀರೋವ್ ವಿರುದ್ಧ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
65 ಕೆ.ಜಿ ವಿಭಾಗದಲ್ಲಿ ಭಜರಂಗ್ ಪುನಿಯಾ ತಮ್ಮ ತಾಂತ್ರಿಕ ಆಟದಿಂದ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದರು. ಏಷ್ಯಾ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಭಜರಂಗ್ ಪೂನಿಯಾ 11-0 ಅಂತರದಲ್ಲಿ ತಜಿಕಸ್ತಾನ್‌ನ ಶರಿಪೋವ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಬೆಳ್ಳಿ ಪದಕವನ್ನು ಉಳಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


