ಖೇಲೋ ಇಂಡಿಯಾದಲ್ಲಿ ಮಲ್ಲಕಂಬದ ಕಸರತ್ತು: ಸಾಂಪ್ರದಾಯಿಕ ಕ್ರೀಡೆಗಳಿಗೆ ವೇದಿಕೆಯಾದ ರಾಷ್ಟ್ರೀಯ ಕೂಟ
ಮುಂದಿನ ವರ್ಷದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ರಾಜ್ಯದ ಪ್ರಸಿದ್ದ ಕ್ರೀಡೆ ಮಲ್ಲಕಂಬ ಸೇರಿ ನಾಲ್ಕು ದೇಶೀಯ ಕ್ರೀಡೆಗಳನ್ನು ಸೇರಿಸಲು ಕೇಂದ್ರ ಕ್ರೀಡಾ ಇಲಾಖೆ ಅನುಮತಿಸಿದೆ.

ನವದೆಹಲಿ: ಮುಂದಿನ ವರ್ಷದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ರಾಜ್ಯದ ಪ್ರಸಿದ್ದ ಕ್ರೀಡೆ ಮಲ್ಲಕಂಬ ಸೇರಿ ನಾಲ್ಕು ದೇಶೀಯ ಕ್ರೀಡೆಗಳನ್ನು ಸೇರಿಸಲು ಕೇಂದ್ರ ಕ್ರೀಡಾ ಇಲಾಖೆ ಅನುಮತಿಸಿದೆ.
ಮಲ್ಲಕಂಬ, ಘಾತ್ಯಾ, ಕಳರಿಪಯಟ್ಟು ಮತ್ತು ತಾಂಗ್ ತಾ ಕ್ರೀಡೆಗಳನ್ನು ಖೇಲೋ ಇಂಡಿಯಾಗೆ ಸೇರಿಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
"ಹರಿಯಾಣದ ಪಂಚಕುಲದಲ್ಲಿ ನಡೆಯಲಿರುವ ಖೆಲೋ ಇಂಡಿಯಾ ಯೂತ್ ಗೇಮ್ಸ್ 2021 ಗೆ ಯೋಗಾಸನದ ಜತೆಜತೆಗೆ 4 ದೇಶೀ ಕ್ರೀಡೆಗಳನ್ನು ಸೇರಿಸಲಾಗಿದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಭಾರತವು ಸ್ಥಳೀಯ ಆಟಗಳ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ ಮತ್ತು ಇವುಗಳನ್ನು ಸಂರಕ್ಷಿಸಲು, ಉತ್ತೇಜಿಸಲು ಮತ್ತು ಜನಪ್ರಿಯಗೊಳಿಸಲು ನಮ್ಮ ಪ್ರಯತ್ನ ಇದಾಗಿದೆ" ಸಚಿವರು ಟ್ವೀಟ್ ನಲ್ಲಿ ಹೇಳಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ "ಭಾರತವು ಸ್ಥಳೀಯ ಆಟಗಳ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ, ಪ್ರಧಾನಿ ನರೇಂದ್ರ ಮೋದಿ ವೆಲ್ಲವನ್ನೂ ಸಂರಕ್ಷಿಸಲು ಮತ್ತು ಜನಪ್ರಿಯಗೊಳಿಸಲು ಬಯಸುತ್ತಾರೆ. ಯೋಗಾಸನದ ಜತೆಜತೆಗೆ ಖೇಲೋ ಇಂಡಿಯಾ ಯೂತ್ ಗೇಮ್ಸ್ 2021ಕ್ಕೆ ಕಳರಿಪಯಟ್ಟು, ಮಲ್ಲಕಂಬ, ಘಾತ್ಯಾ, ಹಾಗೂ ತಾಂಗ್ ತಾ 4 ಸ್ಥಳೀಯ ಆಟಗಳನ್ನು ಸೇರಿಸಲಾಗಿದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ!" ಎಂದಿದ್ದಾರೆ.’
ಮಲ್ಲಕಂಬ ಅಪ್ಪಟ ದೇಶೀಯ ಕ್ರೀಡೆ. ಕೆಲ ಮೀಟರ್ಸ್ ಎತ್ತರದ ಕಟ್ಟಿಗೆ ಕಂಬವನ್ನು ಕುಸ್ತಿ ಪಟ್ಟುಗಳ ಸಾಧನೆಗಾಗಿ ಬಳಸಲಾಗುತ್ತಿತ್ತು. ಈ ಹೆಸರೇ ಸೂಚಿಸುವಂತೆ (ಮಲ್ಲ+ಕಂಬ) ಮಲ್ಲರು ಉಪಯೋಗಿಸುವ ಕಂಬ. ಆದರೆ ನಂತರದ ವರ್ಷಗಳಲ್ಲಿ ಇದೇ ಒಂದು ಸ್ವತಂತ್ರ ಕ್ರೀಡೆಯಾಗಿ ರೂಪುಗೊಂಡಿತು.
ಮಲ್ಲಕಂಬಕ್ಕೆ ಅತ್ಯಂತ ಶ್ರೇಷ್ಠ ಪ್ರದರ್ಶನ ಮೌಲ್ಯವಿದೆ. ನೋಡುಗರನ್ನು ಮಂತ್ರಮುಗ್ಧರನ್ನಾಗಿಸಬಲ್ಲ ಇದು ಉಳಿದೆಲ್ಲ ಕ್ರೀಡೆಗಳಿಗೂ ಸಹಕಾರಿ. ರಷ್ಯದಲ್ಲಿ ಜರುಗಿದ 'ಭಾರತ ಉತ್ಸವ ಕಾರ್ಯಕ್ರಮದಲ್ಲಿ ಮಲ್ಲಕಂಬ ಸಾಕಷ್ಟು ಜನಪ್ರಿಯತೆ ಪಡೆಯಿತು. ರಾಜಕಪೂರ್, ನೆಹರೂ, ನಂತರ ರಷ್ಯನ್ನರ ಮನಗೆದ್ದ ಸಂಗತಿಯೆಂದರೆ ಈ ಮಲ್ಲಕಂಬ ಎಂದು ಅಲ್ಲಿನ ಪತ್ರಿಕೆ ಹಾಡಿ ಹೊಗಳಿವೆ. ಈಗೀಗ ವಿದೇಶಗಳಲ್ಲೂ ಸಾಕಷ್ಟು ಪ್ರದರ್ಶನಗಳು ನಡೆಯುತ್ತಲಿದ್ದು ವಿದೇಶಿಯರನ್ನು ಆಕರ್ಷಿಸುತ್ತಲಿದೆ. ಇದರ ಪರಿಣಾಮ ಮಲ್ಲಕಂಬವನ್ನು ಇತರ ಕ್ರೀಡೆಗಳ ಚಟುವಟಿಕೆಯ ತರಬೇತಿಗಾಗಿ ಆಯ್ಕೆಮಾಡಿಕೊಳ್ಳುವಂಥ ಸಂಶೋಧನೆಗಳು ಪ್ರಾರಂಭವಾಗಿವೆ.
ಕೇರಳದ ಪ್ರಾಚೀನ ಯುದ್ಧಕಲೆ ಕಳರಿಪಯಟ್ಟು ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದೆ. ಘಾತ್ಕಾ ಮತ್ತು ತಾಂಗ್ ತಾ ಕ್ರಮವಾಗಿ ಪಂಜಾಬ್ ಹಾಗೂ ಮಣಿಪುರ ರಾಜ್ಯದ ಸಮರ ಕಲೆಗಳಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


