ಬಾಕ್ಸಿಂಗ್ ವಿಶ್ವಕಪ್: ಭಾರತಕ್ಕೆ 3 ಚಿನ್ನ ಸೇರಿದಂತೆ ಒಂಬತ್ತು ಪದಕ
ಜರ್ಮನಿಯ ಕಲೋನ್‌ನಲ್ಲಿ ನಿನ್ನೆ ಕೊನೆಗೊಂಡ ಕಲೋನ್ ಬಾಕ್ಸಿಂಗ್ ವಿಶ್ವಕಪ್‌ನಲ್ಲಿ ಭಾರತ ಮೂರು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಒಂಬತ್ತು ಪದಕಗಳನ್ನು ಗೆದ್ದುಕೊಂಡಿದೆ.

ನವದೆಹಲಿ: ಜರ್ಮನಿಯ ಕಲೋನ್‌ನಲ್ಲಿ ನಿನ್ನೆ ಕೊನೆಗೊಂಡ ಕಲೋನ್ ಬಾಕ್ಸಿಂಗ್ ವಿಶ್ವಕಪ್‌ನಲ್ಲಿ ಭಾರತ ಮೂರು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಒಂಬತ್ತು ಪದಕಗಳನ್ನು ಗೆದ್ದುಕೊಂಡಿದೆ. ಪುರುಷರ ವಿಭಾಗದಲ್ಲಿ ಅಮಿತ್ ಪಂಗಲ್ ಚಿನ್ನ ಗೆದ್ದರೆ, ಮಹಿಳಾ ವಿಭಾಗದಲ್ಲಿ ಮನೀಶಾ ಮೌನ್ ಮತ್ತು ಸಿಮ್ರಾಂಜಿತ್ ಕೌರ್ ಬಂಗಾರದ ಪದಕ ಸಾಧನೆ ಮಾಡಿದ್ದಾರೆ.
ಮಹಿಳಾ ವಿಭಾಗದಲ್ಲಿ, ಎಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಕಂಚಿನ ಪದಕ ವಿಜೇತೆ ಸಿಮ್ರಾಂಜಿತ್ ಕೌರ್ ಫೈನಲ್‌ನಲ್ಲಿ ಜರ್ಮನಿಯವರೇ ಆದ ಎದುರಾಳಿ ಮಾಯಾ ಕ್ಲೀನ್ಹಾನ್ಸ್ ಅವರನ್ನು ಮಣಿಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ. 57 ಕೆಜಿ ವಿಭಾಗದ ಫೈನಲ್‌ನಲ್ಲಿ ಮನೀಷಾ ಮೌನ್ ಎರಡು ಬಾರಿ ಎಐಬಿಎ ಮಹಿಳಾ ಯುವ ವಿಶ್ವ ಚಾಂಪಿಯನ್ ಸಾಕ್ಷಿ ಚೌಧರಿ ಅವರನ್ನು 3: 2 ಅಂಕಗಳಿಂಡ ಪರಾಜಿತಗೊಳಿಸಿದರು. ಸಾಕ್ಷಿ ತನ್ನ ಅಭಿಯಾನವನ್ನು ಬೆಳ್ಳಿಯೊಂದಿಗೆ ಕೊನೆಗೊಳಿದ್ದಾರೆ.
ಇದಕ್ಕೆ ಮುನ್ನ 2018 ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು 2019 ಎಎಸ್ಬಿಸಿ ಏಷ್ಯನ್ ಚಾಂಪಿಯನ್ ಅಮಿತ್ ಪಂಗಲ್ 52 ಕೆಜಿ ವಿಭಾಗದಲ್ಲಿ ಬಂಗಾರ ಗೆದ್ದರೆ 91 ಕೆಜಿ ವಿಭಾಗದಲ್ಲಿ ತೀಶ್ ಕುಮಾರ್ ಅವರು ರಜತ ಪದಕ ಗಳಿಸಿದ್ದರು.
ಇದಲ್ಲದೆ ಸೋನಿಯಾ ಲೆದರ್ (57 ಕೆಜಿ), ಪೂಜಾ ರಾಣಿ (75 ಕೆಜಿ) ಗೌರವ್ ಸೋಲಂಕಿ (57 ಕೆಜಿ) ಮತ್ತು ಮೊಹಮ್ಮದ್ ಹುಸಾಮುದಿನ್ (57 ಕೆಜಿ) ಆಯಾ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


