ಕ್ರೀಡೆ

ಎಸ್ಎಜಿ: ಜುಡೋದಲ್ಲಿ 5, ಈಜಿನಲ್ಲಿ 6 ಚಿನ್ನ ಗೆದ್ದ ಭಾರತ

ಇಲ್ಲಿ ನಡೆಯುತ್ತಿರುವ 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ಪ್ರಾಬಲ್ಯವನ್ನು ಮುಂದುವರೆಸಿದೆ.

ಎಸ್ಎಜಿ: ಜುಡೋದಲ್ಲಿ 5, ಈಜಿನಲ್ಲಿ 6 ಚಿನ್ನ ಗೆದ್ದ ಭಾರತ
ಎಸ್ಎಜಿ: ಜುಡೋದಲ್ಲಿ 5, ಈಜಿನಲ್ಲಿ 6 ಚಿನ್ನ ಗೆದ್ದ ಭಾರತ
Published On :

ಕಠ್ಮಂಡು: ಇಲ್ಲಿ ನಡೆಯುತ್ತಿರುವ 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ಪ್ರಾಬಲ್ಯವನ್ನು ಮುಂದುವರೆಸಿದೆ. 

ಭಾನುವಾರ ಜುಡೋದಲ್ಲಿ ಐದು, ಈಜಿನಲ್ಲಿ ಆರು, ಫೆನ್ಸಿಂಗ್‌ನಲ್ಲಿ ಮೂರು ಚಿನ್ನ ಗೆದ್ದಿದೆ. ಭಾರತ ಇದುವರೆಗೆ 125 ಚಿನ್ನ, 74 ಬೆಳ್ಳಿ ಮತ್ತು 40 ಕಂಚಿನ ಪದಕಗಳನ್ನು ಒಳಗೊಂಡಂತೆ ಒಟ್ಟು 239 ಪದಕಗಳನ್ನು ತನ್ನದಾಗಿಸಿಕೊಂಡಿದೆ. 

ಈ ಪಂದ್ಯಗಳಲ್ಲಿ ಭಾರತವು ಭಾನುವಾರದವರೆಗೆ 239 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.  ಆತಿಥೇಯ ನೇಪಾಳದಲ್ಲಿ 45 ಚಿನ್ನ, 42 ಬೆಳ್ಳಿ ಮತ್ತು 71 ಕಂಚಿನ ಪದಕಗಳನ್ನು ಒಳಗೊಂಡಂತೆ 158 ಪದಕ ಮತ್ತು ಶ್ರೀಲಂಕಾ 32 ಚಿನ್ನ, 64 ಬೆಳ್ಳಿ ಮತ್ತು 92 ಕಂಚಿನ ಪದಕ ಒಳಗೊಂಡಂತೆ 188 ಪದಕ ಪಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.