ಪ್ರೊ ಕಬಡ್ಡಿ: ನಾಕೌಟ್ ಗೆ ಹರಿಯಾಣ ಕ್ವಾಲಿಫೈ
ಕೊನೆಯ ಕ್ಷಣದವರೆಗೂ ರೋಚಕತೆ ಹುಟ್ಟಿಸಿದ್ದ ಏಳನೇ ಅವೃತ್ತಿ ಪ್ರೊ ಕಬಡ್ಡಿ ಲೀಗ್ ನ 114ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 38-37 ರಿಂದ ಗುಜರಾತ್ ಫಾರ್ಚುನ್ ಜೇಂಟ್ಸ್ ತಂಡವನ್ನು ಮಣಿಸಿ, ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ.

ಪಂಚಕುಲ: ಕೊನೆಯ ಕ್ಷಣದವರೆಗೂ ರೋಚಕತೆ ಹುಟ್ಟಿಸಿದ್ದ ಏಳನೇ ಅವೃತ್ತಿ ಪ್ರೊ ಕಬಡ್ಡಿ ಲೀಗ್ ನ 114ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 38-37 ರಿಂದ ಗುಜರಾತ್ ಫಾರ್ಚುನ್ ಜೇಂಟ್ಸ್ ತಂಡವನ್ನು ಮಣಿಸಿ, ಮುಂದಿನ ಹಂತಕ್ಕೆ ಅರ್ಹತೆ ಪಡೆದಿದೆ. ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹರಿಯಾಣ 19 ಪಂದ್ಯಗಳಿಂದ 65 ಅಂಕ ಕಲೆ ಹಾಕಿದ್ದು, ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ. ಮೊದಲಾವಧಿಯಲ್ಲಿ 19-14 ರಿಂದ ಮುನ್ನಡೆ ಸಾಧಿಸಿತ್ತು. ಎರಡನೇ ಅವಧಿಯಲ್ಲಿ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಉಭಯ ತಂಡಗಳು ಅಂಕ ಬೇಟೆಗೆ ಇಳಿದವು.
ದಾಳಿಯಲ್ಲಿ ಹರಿಯಾಣ 23 ಅಂಕಗಳನ್ನು ಕಲೆ ಹಾಕಿತು. ಗುಜರಾತ್ ಟ್ಯಾಕಲ್ ನಲ್ಲಿ 13 ಅಂಕಗಳನ್ನು ಕಲೆ ಹಾಕಿತು. ಇನ್ನು ಉಭಯ ತಂಡಗಳು ತಲಾ ಒಂದೊಂದು ಬಾರಿ ಆಲೌಟ್ ಆದವು. ಇನ್ನು ಹರಿಯಾಣ ಪರ ವಿಕಾಸ್ ಕಂಡೋಲ್ 20 ಬಾರಿ ದಾಳಿ ನಡೆಸಿ 10 ಅಂಕ ಕಲೆ ಹಾಕಿದರು. ಪ್ರಶಾಂತ್ ಕುಮಾರ್ ರೈ 9 ಅಂಕ ಸಂಪಾದಿಸಿದರು. ಜೇಂಟ್ಸ್ ಪರ ರೋಹಿತ್ ಗುಲಿಯಾ 11, ಸೋನು 8 ಅಂಕ ಬುಟ್ಟಿಗೆ ಹಾಕಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


