ವಿಶ್ವ ಕುಸ್ತಿ: ಬಜರಂಗ್ ಪುನಿಯಾಗೆ ಕಂಚಿನ ಕಿರೀಟ!
ಕಝಕಿಸ್ತಾನದಲ್ಲಿ ನಡೆಯುತ್ತಿರ್ವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಭರವಸೆಯ ಕುಸ್ತಿಪಟು, ಬಜರಂಗ್ ಪುನಿಯಾ ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

ನೂರ್-ಸುಲ್ತಾನ್ (ಕಝಕಿಸ್ತಾನ): ಕಝಕಿಸ್ತಾನದಲ್ಲಿ ನಡೆಯುತ್ತಿರ್ವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಭರವಸೆಯ ಕುಸ್ತಿಪಟು, ಬಜರಂಗ್ ಪುನಿಯಾ ಕಂಚಿನ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.
ಮಂಗೋಲಿಯನ್ ಆಟಗಾರ ತುಲ್ಗಾ ತುಮರ್ ಒಚಾರ್ ಅವರ ವಿರುದ್ಧ ಕಾದಾಡಿ 6-0 ಕೊರತೆಯಿಂದ ಹಿಂದೆ ಬಿದ್ದು 8-7 ಅಂತರದಲ್ಲಿ ಕಂಚಿಗೆ ಕೊರಳೊಡ್ಡಿದ್ದಾರೆ.ಇದು 25 ವರ್ಗಳ ಇತಿಹಾಸದಲ್ಲಿ ಭಾರತಕ್ಕೆ ಒಲಿದ ಎರಡನೇ ಸೀನಿಯರ್ ವಿಭಾಗದ ಪದಕವಾದರೆ ಒಟ್ಟಾರೆ ಮೂರನೇ ಪದಕವಾಗಿದೆ.
ಪ್ರಾರಂಭದಲ್ಲಿ ಮಂಗೋಲಿಯನ್ ಆಟಗಾರ ಮುನ್ನಡೆ ಸಾಧಿಸಿದ್ದು ಮೊದಲ ಸುತ್ತು ಪೂರ್ಣಗೊಳ್ಳುವ ವೇಳೆ ಸ್ಕೋರ್ 6-2 ಆಗಿತ್ತು. ಆದರೆ ದ್ವಿತೀಯ ಸುತ್ತಿನಲ್ಲಿ ಬಜರಂಗ್ ಲೆಗ್ ಶಾಟ್ ಮೂಲಕ ಎದುರಿಸಿದ್ದಲ್ಲದೆ 8-6 ಮುನ್ನಡೆ ಸಾಧಿಸಿದರು
2018ರಲ್ಲಿ ಬುಡಾಪೆಸ್ಟ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗಳಿಸಿದ ನಂತರ ಬಜರಂಗ್ ಪಾಲಿಗೆ ಇದು ಸತತ ಎರಡನೇ ವಿಶ್ವ ಚಾಂಪಿಯನ್‌ಶಿಪ್ ಪದಕವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


