ಬಿಲಿಯರ್ಡ್ಸ್: ಪಂಕಜ್ ಅಡ್ವಾಣಿಗೆ ವಿಶ್ವ ಚಾಂಪಿಯನ್ ಪಟ್ಟ, ವಿಶ್ವವಿಜೇತನ ಮುಡಿಗೆ 22ನೇ ಜಾಗತಿಕ ಪ್ರಶಸ್ತಿ ಗರಿ
ಭಾರತದ ಹೆಮ್ಮೆಯ ಬಿಲಿಯರ್ಡ್ಸ್ ತಾರೆ ಪಂಕಜ್ ಅಡ್ವಾಣಿ ಭಾನುವಾರ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನ 150 ಅಪ್(Up) ವಿಭಾಗದಲ್ಲಿ ನಾಲ್ಕನೇ ನೇರ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ದಾಖಲೆಯ 22 ನೇ ವಿಶ್ವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಹೆಮ್ಮೆಯ ಬಿಲಿಯರ್ಡ್ಸ್ ತಾರೆ ಪಂಕಜ್ ಅಡ್ವಾಣಿ ಭಾನುವಾರ ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನ 150 ಅಪ್ (Up) ವಿಭಾಗದಲ್ಲಿ ನಾಲ್ಕನೇ ನೇರ ಫೈನಲ್ ಪಂದ್ಯವನ್ನು ಗೆಲ್ಲುವ ಮೂಲಕ ದಾಖಲೆಯ 22 ನೇ ವಿಶ್ವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
34 ವರ್ಷ ವಯಸ್ಸಿನ ಪಂಕಜ್ 2014ರಿಂದ ಸತತವಾಗಿ ವಿಶ್ವ ಚಾಂಪಿಯನ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳುತ್ತಾ ಬಂದಿದ್ದಾರೆ.ಬಿಲಿಯರ್ಡ್ಸ್ ನ ಶಾರ್ಟ್ ಫಾರ್ಮ್ಯಾಟ್ ನಲ್ಲಿ ಪಂಕಜ್ ಅವರಿಗಿದು ಕಳೆದ ಆರು ವರ್ಷಗಳಲ್ಲಿ ಐದನೇ ಪ್ರಶಸ್ತಿಯಾಗಿದೆ.
ಮಯನ್ಮಾರ್ ನ ನೇ ಥ್ವೇ ಓಅವರ ವಿರುದ್ಧ 6-2 150(145)-4, 151(89)-66, 150(127)-50(50), 7-150(63,62), 151(50)-69(50), 150(150)-0, 133(64)-150(105), 150(74)-75(63). ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
"ಇದು ಟಚ್ ಆಂಡ್ ಗೋ ಫಾರ್ಮ್ಯಾಟ್ ನ ಪಂದ್ಯವಾಗಿದ್ದು ಈ ನಾಲ್ಕು ವರ್ಷಗಳಲ್ಲಿ ಸತತ ಚಾಂಪಿಯನ್ ಪಟ್ಟ ಹಾಗೆಯೇ ಕಳೆದ ಆರು ವರ್ಷಗಳಲ್ಲಿ ಐದು ಪಂದ್ಯಗಳನ್ನು ಗೆಲ್ಲುವ ಸಾಧನೆ ನಿಜಕ್ಕೂ ವಿಶೇಷವಾಗಿದೆ"ಚಾಂಪಿಯನ್ ಕ್ರೀಡಾಪಟು ಪಂಕಜ್ ಹೇಳಿದ್ದಾರೆ.
ಬೆಂಗಳೂರು ಮೂಲದ ಪಂಕಜ್ ಅಡ್ವಾಣಿ 2003 ರಿಂದ ಜಾಗತಿಕ ಚಾಂಪಿಯನ್ ಪಟ್ಟ ಅಲಂಕರಿಸುತ್ತಾ ಪ್ರಶಸ್ತಿ ಗೆಲ್ಲುವ ಭರವಸೆಯ ಆಟಗಾರನಾಇ ಮುಂದುವರಿಯುತ್ತಿದ್ದಾರೆ.ಇದೀಗ ಅಚ್ಚರಿಯೆಂಬಂತೆ 22 ನೇ ವಿಶ್ವ ಪ್ರಶಸ್ತಿಯನ್ನು ಗೆದ್ದ ಪಂಕಜ್, "ನಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವಾಗಲೆಲ್ಲಾ ಒಂದು ವಿಷಯ ಸ್ಪಷ್ಟವಾಗುತ್ತದೆ -ಗೆಲುವು ನನ್ನ ಸ್ಪೂರ್ತಿಯನ್ನು ಕಸಿಯುವುದಿಲ್ಲ. ಗೆಲುವು ನನ್ನ ಹಸಿವು, ಆ ಬೆಂಕಿ ಎಂದಿಗೂ ಆರುವುದಿಲ್ಲ." ಎಂದರು.
ಇದೀಗ ಪಂಕಜ್ ಐಬಿಎಸ್ಎಫ್ ವರ್ಲ್ಡ್ ಸಿಕ್ಸ್-ರೆಡ್ ಸ್ನೂಕರ್ ಮತ್ತು ವರ್ಲ್ಡ್ ಟೀಂ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದು ಇದಕ್ಕಾಗಿ ತುರ್ತು ತಯಾರಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


