ಒಲಿಂಪಿಕ್ ಟೆಸ್ಟ್ ಈವೆಂಟ್: ಫೈನಲ್ ತಲುಪಿದ ಶಿವ ಥಾಪ, ಪೂಜಾ ರಾಣಿ
ಭಾರತದ ಸ್ಟಾರ್ ಬಾಕ್ಸರ್ ಶಿವ ಥಾಪ ಹಾಗೂ ಪೂಜಾ ರಾಣಿ ಅವರು ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಒಲಿಂಪಿಕ್ಸ್ ಟೆಸ್ಟ್ ಈವೆಂಟ್‌ನಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ. ಆದರೆ, ಇನ್ನುಳಿದ ಇಬ್ಬರು...

ಟೋಕಿಯೊ: ಭಾರತದ ಸ್ಟಾರ್ ಬಾಕ್ಸರ್ ಶಿವ ಥಾಪ ಹಾಗೂ ಪೂಜಾ ರಾಣಿ ಅವರು ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಒಲಿಂಪಿಕ್ಸ್ ಟೆಸ್ಟ್ ಈವೆಂಟ್‌ನಲ್ಲಿ ಫೈನಲ್ ಪ್ರವೇಶ ಮಾಡಿದ್ದಾರೆ. ಆದರೆ, ಇನ್ನುಳಿದ ಇಬ್ಬರು ಭಾರತೀಯರು ಸೆಮಿಫೈನಲ್ಸ್ ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಬುಧವಾರ ನಡೆದ ಪುರುಷರ 63 ಕೆ.ಜಿ ವಿಭಾಗದಲ್ಲಿ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ನಾಲ್ಕು ಬಾರಿ ಏಷ್ಯನ್ ಪದಕ ವಿಜೇತ ಶಿವ ಥಾಪ ಅವರು ಜಪಾನ್‌ನ ಡೈಸುಕ್ ನರಿಮಾಟ್ಸು ಅವರ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೆ ಪ್ರವೇಶ ಮಾಡಿದ್ದಾರೆ.
ಶಿವ ಥಾಪ ಅವರು ಪ್ರಸಕ್ತ ತಿಂಗಳಿನ ಆರಂಭದಲ್ಲಿ ಮೂರನೇ ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.
ಇನ್ನು, ಮಹಿಳೆಯರ 75 ಕೆ.ಜಿ ವಿಭಾಗದಲ್ಲಿ ಏಷ್ಯನ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಭಾರತದ ಪೂಜಾ ರಾಣಿ ಅವರು ಬ್ರೆಜಿಲ್ ನ ಬೀಟ್ರಿಝ್ ಸೋರ್ಸ್ ಅವರ ವಿರುದ್ಧ ಸರ್ವಾನುಮತದ ಆಧಾರದ ಮೇಲೆ ಫೈನಲ್‌ಗೆ ಲಗ್ಗೆ ಇಟ್ಟರು. ಪೂಜಾ ರಾಣಿ ಅವರು ವರ್ಷದ ಆರಂಭದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


