ಫ್ರೆಂಚ್ ಓಪನ್: ಇತಿಹಸ ಸೃಷ್ಟಿಸಿದ ಸಾತ್ವಿಕ್-ಚಿರಾಗ್ ಜೋಡಿ ಫೈನಲ್ಸ್ ಪ್ರವೇಶ
ಭಾರತ ಪುರುಷರ ವಿಭಾಗದ ಅಗ್ರ ಶ್ರೇಯಾಂಕಿತ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಶನಿವಾರ ನಡೆದ ತಮ್ಮ ಫ್ರೆಂಚ್ ಓಪನ್ ಬಿಡಬ್ಲ್ಯೂಎಫ್ ಸೂಪರ್ 750 ಸೆಮಿಫೈನಲ್‌ನಲ್ಲಿ ಜಪಾನ್ ಜೋಡಿಯ ವಿರುದ್ಧ ಗೆಲುವು ಸಾಧಿಸಿ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ಪಂದ್ಯಾವಳಿಯ ಫೈನಲ್‌ಗೆ ತಲುಪಿದ್ದಾರೆ.

ಪ್ಯಾರಿಸ್: ಭಾರತ ಪುರುಷರ ವಿಭಾಗದ ಅಗ್ರ ಶ್ರೇಯಾಂಕಿತ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಶನಿವಾರ ನಡೆದ ತಮ್ಮ ಫ್ರೆಂಚ್ ಓಪನ್ ಬಿಡಬ್ಲ್ಯೂಎಫ್ ಸೂಪರ್ 750 ಸೆಮಿಫೈನಲ್‌ನಲ್ಲಿ ಜಪಾನ್ ಜೋಡಿಯ ವಿರುದ್ಧ ಗೆಲುವು ಸಾಧಿಸಿ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ಪಂದ್ಯಾವಳಿಯ ಫೈನಲ್‌ಗೆ ತಲುಪಿದ್ದಾರೆ.
ಜಾಪಾನಿನ ವಿಶ್ವದ 6 ನೇ ಕ್ರಮಾಂಕದಹಿರೊಯುಕಿ ಎಂಡೋ ಮತ್ತು ಯುಟಾ ವಟನಾಬೆ ಅವರನ್ನು 21-11, 25-23 ಸೆಟ್‌ಗಳಿಂದ ಭಾರತೀಯ ಜೊಡಿ ಮಣಿಸುವ ಮೂಲಕ ಈ ಸಾಧನೆ ಮಾಡಿದೆ.
ಇದಕ್ಕೆ ಮುನ್ನ ಸಾತ್ವಿಕ್ ಮತ್ತು ಚಿರಾಗ್ ಜೋಡಿಉ ಕ್ವಾರ್ಟರ್ ಫೈನಲ್ಸ್ ನಲ್ಲಿ ವಿಶ್ವದ ಎಂಟನೇ ಶ್ರೇಯಾಂಕದ ಕಿಮ್ ಅಸ್ಟ್ರುಪ್ ಹಾಗೂ ಆಂಡರ್ಸ್ ಸ್ಕಾರುಪ್ ವಿರುದ್ಧ ಗೆದ್ದು 21-13, 22-20 ಅಂತರದಲ್ಲಿ ಗೆದ್ದು ಸೆಮೀಸ್ ಪ್ರವೇಶಿಸಿತ್ತು.
ಈ ವರ್ಷ ಆಗಸ್ಟ್ ನಲ್ಲಿ ನಡೆದಿದ್ದ ಥಾಯ್ ಲ್ಯಾಂಡ್ ಓಪನ್‌ನಲ್ಲಿ ಸಹ ಸಾತ್ವಿಕ್ -ಚಿರಾಗ್ ಜೋಡಿ ಮೊದಲ ಸೂಪರ್ 500 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು ಭಾನುವಾರ ನಡೆಯುವ ಫೈನಲ್‌ನಲ್ಲಿ ಅವರು ವಿಶ್ವದ ನಂ .1 ಜೋಡಿ ಮಾರ್ಕಸ್ ಗಿಡಿಯಾನ್ ಮತ್ತು ಕೆವಿನ್ ಸಂಜಯಾ ವಿರುದ್ಧ ಸೆಣಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


