ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಿಗೆ ಭಾರತ ಹಾಕಿ ತಂಡ ಪ್ರಕಟ
ಮುಂಬರುವ ಎಫ್‌ಐಎಚ್ ಹಾಕಿ ಒಲಿಂಪಿಕ್‌ಸ್ ಅರ್ಹತಾ ಸುತ್ತಿನ ಟೂರ್ನಿಗೆ ಪುರುಷರ ಹಾಗೂ ಮಹಿಳೆಯರ ಭಾರತ ಹಾಕಿ ತಂಡಗಳನ್ನು ಪ್ರಕಟಿಸಲಾಗಿದೆ.

ನವದೆಹಲಿ: ಮುಂಬರುವ ಎಫ್‌ಐಎಚ್ ಹಾಕಿ ಒಲಿಂಪಿಕ್‌ಸ್ ಅರ್ಹತಾ ಸುತ್ತಿನ ಟೂರ್ನಿಗೆ ಪುರುಷರ ಹಾಗೂ ಮಹಿಳೆಯರ ಭಾರತ ಹಾಕಿ ತಂಡಗಳನ್ನು ಪ್ರಕಟಿಸಲಾಗಿದೆ.
ಯಾವುದೇ ಬದಲಾವಣೆ ಇಲ್ಲದ 18 ಆಟಗಾರ್ತಿಯರ ಭಾರತ ಮಹಿಳಾ ಹಾಕಿ ತಂಡವನ್ನು ಎಂದಿನಂತೆ ರಾಣಿ ರಾಂಪಾಲ್ ಅವರು ಮುನ್ನಡೆಸಲಿದ್ದಾರೆ. 18 ಮಂದಿ ಪುರುಷರ ಭಾರತ ತಂಡವನ್ನು ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಕನ್ನಡಿಗ ಎಸ್.ವಿ ಸುನೀಲ್ ಉಪ ನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮಹಿಳೆಯರ ತಂಡಕ್ಕೆೆ ಗೋಲ್ ಕೀಪರ್ ಸವಿತಾ ಉಪ ನಾಯಕಿಯಾಗಿದ್ದಾರೆ.

ಓಡಿಶಾದಲ್ಲಿ ಪುರುಷ ಹಾಗೂ ಮಹಿಳಾ ಎರಡೂ ತಂಡಗಳು ಟೋಕಿಯೊ ಒಲಿಂಪಿಕ್‌ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ತೊಡಗಲಿವೆ. ಐದನೇ ಶ್ರೇಯಾಂಕದ ಭಾರತ ಪುರುಷರ ತಂಡ 22ನೇ ಶ್ರೇಯಾಂಕದ ರಷ್ಯಾ ವಿರುದ್ಧ ಸೆಣಸಲಿದೆ. ಇದರ ಜತೆ ಒಂಬತ್ತನೇ ಶ್ರೇಯಾಂಕದ ಭಾರತ ವನಿತೆಯರು 13ನೇ ಸ್ಥಾನದ ಯುಎಸ್‌ಎ ವಿರುದ್ಧ ಕಾದಾಟ ನಡೆಸಲಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


