ಫುಟ್ಬಾಲ್ : ಓಮನ್ ವಿರುದ್ಧ ಭಾರತಕ್ಕೆ 1-0 ಅಂತರದಲ್ಲಿ ಸೋಲು
ಕಠಿಣ ಹೋರಾಟದ ನಡುವೆಯೂ ಭಾರತ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಓಮನ್ ವಿರುದ್ಧ ಸೋಲು ಅನುಭವಿಸಿತು. ಇದರೊಂದಿಗೆ ವಿಶ್ವಕಪ್ ಅರ್ಹತೆ ಪಡೆಯುವ ಸುನೀಲ್ ಚೆಟ್ರಿ ಪಡೆಯ ಹಾದಿಗೆ ಕೊಡಲಿಪೆಟ್ಟು ಬಿದ್ದಂತಾಗಿದೆ.

ಮಸ್ಕತ್ : ಕಠಿಣ ಹೋರಾಟದ ನಡುವೆಯೂ ಭಾರತ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಓಮನ್ ವಿರುದ್ಧ ಸೋಲು ಅನುಭವಿಸಿತು. ಇದರೊಂದಿಗೆ ವಿಶ್ವಕಪ್ ಅರ್ಹತೆ ಪಡೆಯುವ ಸುನೀಲ್ ಚೆಟ್ರಿ ಪಡೆಯ ಹಾದಿಗೆ ಕೊಡಲಿಪೆಟ್ಟು ಬಿದ್ದಂತಾಗಿದೆ.
ಇಲ್ಲಿನ ಸುಲ್ತಾನ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಅಲ್ ಘಸ್ಸಾನಿ (33ನೇ ನಿ.) ಗಳಿಸಿದ ಏಕೈಕ ಗೋಲಿನ ಸಹಾಯದಿಂದ ಓಮನ್ ತಂಡ 1-0 ಅಂತರದಲ್ಲಿ ಭಾರತದ ವಿರುದ್ಧ ಗೆಲುವಿನ ನಗೆ ಬೀರಿತು. ಗೆಲುವಿನೊಂದಿಗೆ ಓಮನ್ ತನ್ನ ಖಾತೆಗೆ ಮೂರು ಅಂಕಗಳನ್ನು ಪಡೆಯಿತು.
ಒಟ್ಟಾರೆ 12 ಅಂಕಗಳೊಂದಿಗೆ ಓಮನ್ ‘ಇ ’ ಗುಂಪಿನ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಗಟ್ಟಿ ಮಾಡಿಕೊಂಡಿತು. ಅಗ್ರ ಸ್ಥಾನದಲ್ಲಿ 13 ಅಂಕಗಳೊಂದಿಗೆ ಕತಾರ್ ಇದೆ. ಕೇವಲ ಮೂರು ಅಂಕಗಳೊಂದಿಗೆ ಭಾರತ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ನಡುವೆ ಭಾರಿ ಕಾದಾಟ ನಡೆದಿತ್ತು. ಇದರ ನಡುವೆ 24ನೇ ನಿಮಿಷದಲ್ಲಿ ಭಾರತದ ಆದಿಲ್ ಖಾನ್ ತಪ್ಪು ಎಸಗಿದ್ದರಿಂದ ಮ್ಯಾಚ್ ರೆಫರಿಯಿಂದ ಹಳದಿ ಕಾರ್ಡ್ ಪಡೆದುಕೊಂಡರು. ನಂತರ, ಚೆಂಡಿನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಓಮನ್ ಮೊದಲ ಅವಧಿಯಲ್ಲಿ ಗೋಲಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು.
33ನೇ ನಿಮಿಷದಲ್ಲಿ ಭಾರತ ರಕ್ಷಣಾ ವಿಭಾಗದಲ್ಲಿ ಮಾಡಿದ ತಪ್ಪುಗಳನ್ನು ಸದುಪಯೋಗಪಡಿಸಿಕೊಂಡ ಎದುರಾಳಿ ತಂಡದ ಅಲ್ ಘಸ್ಸಾನಿ ಅವರು ಓಮನ್‌ಗೆ ಮೊದಲನೇ ಗೋಲು ತಂದುಕೊಟ್ಟರು. ಇದರೊಂದಿಗೆ ಮೊದಲನೇ ಅವಧಿಯಲ್ಲಿ ಓಮನ್ 1-0 ಮುನ್ನಡೆಯೊಂದಿಗೆ ಗೆಲುವು ಸಾಧಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


