ಡಬ್ಲ್ಯುಟಿಎ ಕಿರೀಟ ಮುಡುಗೇರಿಸಿಕೊಂಡ ಆ್ಯಶ್ಲೆ ಬಾರ್ಟಿ
ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ಹಾಲಿ ಚಾಂಪಿಯನ್ ಎಲೀನಾ ಸ್ವಿಟೋಲಿನಾ ಅವರ ವಿರುದ್ಧ ಫೈನಲ್ ಹಣಾಹಣಿಯಲ್ಲಿ ಗೆದ್ದು ಡಬ್ಲ್ಯುಟಿಎ ಫೈನಲ್ಸ್ ಪ್ರಶಸ್ತಿ ಮುಡುಗೇರಿಸಿಕೊಂಡರು.

ಶೆಂಜಾನ್: ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು ಹಾಲಿ ಚಾಂಪಿಯನ್ ಎಲೀನಾ ಸ್ವಿಟೋಲಿನಾ ಅವರ ವಿರುದ್ಧ ಫೈನಲ್ ಹಣಾಹಣಿಯಲ್ಲಿ ಗೆದ್ದು ಡಬ್ಲ್ಯುಟಿಎ ಫೈನಲ್ಸ್ ಪ್ರಶಸ್ತಿ ಮುಡುಗೇರಿಸಿಕೊಂಡರು.
ಭಾನುವಾರ ಒಂದು ಗಂಟೆ 26 ನಿಮಿಷಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಪಾರಮ್ಯ ಸಾಧಿಸಿದ ವಿಶ್ವದ ಅಗ್ರ ಶ್ರೇಯಾಂಕಿತೆ ಬಾರ್ಟಿ, 6-4, 6-3 ಅಂತರದಲ್ಲಿ ಸ್ವಿಟೋಲಿನಾ ಅವರನ್ನು ಮಣಿಸಿ ವೃತ್ತಿ ಜೀವನದ ಚೊಚ್ಚಲ ಡಬ್ಲ್ಯುಟಿಎ ಚಾಂಪಿಯನ್ ಆಗಿ ಹೊರಹೊಮ್ಮಿದರು. ಅಲ್ಲದೇ, 1976ರ ಬಳಿಕ ಈ ಪ್ರಶಸ್ತಿ ಗೆದ್ದ ಮೊದಲ ಆಸ್ಟ್ರೇಲಿಯಾ ಟೆನಿಸ್ ಆಟಗಾರ್ತಿ ಎಂಬ ಸಾಧನೆಗೂ ಭಾಜನರಾದರು.
ಎಲೀನಾ ಸ್ವಿಟೋಲಿನಾ ವಿರುದ್ಧ ಕಳೆದ ಐದು ಪ್ರಯತ್ನಗಳಲ್ಲಿ ಆ್ಯಶ್ಲಿ ಬಾರ್ಟಿ ಗೆದ್ದು ಪ್ರಭುತ್ವ ಸಾಧಿಸಿದ್ದಾರೆ. ಅದರಂತೆ ಭಾನುವಾರ ನಡೆದ ಪಂದ್ಯದಲ್ಲಿ ವಿಶ್ವಾಸದಿಂದ ಕಣಕ್ಕೆ ಇಳಿದ ಬಾರ್ಟಿ ಅದ್ಭುತ ಪ್ರದರ್ಶನ ತೋರಿದರು. ಇದರ ಫಲವಾಗಿ ಮೊದಲನೇ ಸೆಟ್ ನಲ್ಲಿ 6-4 ಹಾಗೂ ಎರಡನೇ ಸೆಟ್ ನಲ್ಲಿ 6-3 ಅಂತರದಲ್ಲಿ ನೇರ ಸೆಟ್ ಗಳಿಂದ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡರು.
ಮಹಿಳಾ ಡಬಲ್ಸ್ ವಿಭಾಗದಲ್ಲಿ ಟೈಮಾ ಬಾಬೋಸ್ ಮತ್ತು ಕ್ರಿಸ್ಟಿನಾ ಮ್ಲೆಡೆನೋವಿಕ್ ಜೋಡಿಯು ಫೈನಲ್ ಹಣಾಹಣಿಯಲ್ಲಿ ಬಾರ್ಬೊರಾ ಸ್ಟ್ರೈಕೋವಾ ಮತ್ತು ಹ್ಸೀಹ್ ಸು-ವೀ ವಿರುದ್ಧ 6-1, 6-3 ಅಂತರದಲ್ಲಿ ಗೆದ್ದು ಡಬ್ಲ್ಯುಟಿಎ ಫೈನಲ್ಸ್ ಡಬಲ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


