ಕ್ರೀಡೆ

ಹಣಕ್ಕಾಗಿ ಅಕ್ಕನಿಂದ ಬ್ಲ್ಯಾಕ್‌ಮೇಲ್, 'ಸಲಿಂಗಿ' ಎಂದು ಹೇಳಿಕೊಳ್ಳಲು ಅದೇ ಕಾರಣ: ದ್ಯುತಿ ಚಾಂದ್‌

: 'ನಾನು ಸಲಿಂಗಿ' ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದ ಭಾರತದ ವೇಗದ ಓಟಗಾರ್ತಿ ದ್ಯುತಿ ಚಾಂದ್‌, ನಾನು ಈ ರೀತಿ ಹೇಳಲು ಕಾರಣ ಏನೆಂಬುದನ್ನು ..

ಹಣಕ್ಕಾಗಿ ಅಕ್ಕನಿಂದ ಬ್ಲ್ಯಾಕ್‌ಮೇಲ್, 'ಸಲಿಂಗಿ' ಎಂದು ಹೇಳಿಕೊಳ್ಳಲು ಅದೇ ಕಾರಣ: ದ್ಯುತಿ ಚಾಂದ್‌
ದ್ಯುತಿ ಚಾಂದ್
Published On :
ಭುವನೇಶ್ವರ್: 'ನಾನು ಸಲಿಂಗಿ' ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದ ಭಾರತದ ವೇಗದ ಓಟಗಾರ್ತಿ ದ್ಯುತಿ ಚಾಂದ್‌, ನಾನು ಈ ರೀತಿ ಹೇಳಲು ಕಾರಣ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ. 
ತಾನು ಸಲಿಂಗಿಯೆಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಕ್ಕೆ ತನ್ನ ಸಹೋದರಿಯ ಮಾನಸಿಕ ಕಿರುಕುಳ ಕಾರಣ. ತನ್ನ ಸಹೋದರಿ ಸರಸ್ವತಿ ತನ್ನಲ್ಲಿ 25 ಲಕ್ಷ ರೂ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ದ್ಯುತಿ ಚಾಂದ್‌ ದೂರಿದ್ದಾರೆ.
'ಕಳೆದ ಮೂರು ವರ್ಷಗಳಿಂದ ನಾನು ನಮ್ಮ ಗ್ರಾಮದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಈ ವಿಚಾರ ನನ್ನ ಅಕ್ಕನಿಗೆ ಗೊತ್ತಿತ್ತು. ಹಣ ಕೊಡು ಇಲ್ಲ, ಈ ವಿಚಾರವನ್ನು ಬಹಿರಂಗಪಡಿಸುತ್ತೇನೆ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದಳು. ಹೀಗಾಗಿ ನಾನೇ ಈ ಸಂಗತಿಯನ್ನು ಹೇಳಿಕೊಳ್ಳಬೇಕಾಯಿತು" ಎಂದು ದ್ಯುತಿ ಚಾಂದ್‌ ಸ್ಪಷ್ಟನೆ ನೀಡಿದ್ದಾರೆ. 
ದ್ಯುತಿ ಚಾಂದ್‌ ದೂರಿರುವ ಸಹೋದರಿ ಸರಸ್ವತಿ ಚಾಂದ್ ಕೂಡ ಅಥ್ಲೀಟ್. ಏಷ್ಯನ್ ಕ್ರೀಡಾಕೂಟದಲ್ಲಿ ಸರಸ್ವತಿ ಕೂಡ ಪದಕ ಜಯಿಸಿದ್ದರು. ಎರಡು ದಿನಗಳ ಹಿಂದೆ ದ್ಯುತಿ ಚಾಂದ್‌ ತಾಯಿ ಅಖುಜಿ ಅವರು "ತನ್ನ ಮಗಳು ಸಲಿಂಗ ಕಾಮಿಯಲ್ಲ. ಇದನ್ನು ನಾನು ನಂಬುವುದಿಲ್ಲ ಎಂದು ಹೇಳಿದ್ದರು. ಸದ್ಯ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ದ್ಯುತಿ ಚಾಂದ್‌ ಅಭ್ಯಾಸದಲ್ಲಿ ತಲ್ಲೀನರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.