ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್: ಮೊದಲ ಸುತ್ತಲ್ಲೇ ಸಿಂಧೂಗೆ ಸೋಲು, ಎರಡನೇ ಸುತ್ತಿಗೆ ಸಾಯ್ ಪ್ರಣೀತ್
ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧೂ ಮೊದಲ ಸುತ್ತಿನಲ್ಲೇ ಸೋತು....

Published On :
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧೂ ಮೊದಲ ಸುತ್ತಿನಲ್ಲೇ ಸೋತು ಹಿಂದೆ ಸರಿದಿದ್ದಾರೆ. ಇನ್ನೊಂದೆಡೆ ಪುರುಷರ ವಿಭಾಗದಲ್ಲಿ ಸಾಯ್ ಪ್ರಣೀತ್ ಎರಡನೇ ಸುತ್ತು ಪ್ರವೇಶಿಸಲು ಯಶಸ್ವಿಯಾಗಿದ್ದಾರೆ.
ದಕ್ಷಿಣ ಕೊರಿಯಾ ಎದುರಾಳಿ ಸುಂಗ್ ಜಿ ಹ್ಯೂನ್ ವಿರುದ್ಧ 16-21, 22-20, 18-21ಸೆಟ್ ಗಳಿಂದ ಸಿಂಧೂ ಪರಾಜಿತರಾಗಿದ್ದಾರೆ. ಇದು ಸುಂಗ್ ಜಿ ಎದುರಲ್ಲಿ ಸಿಂಧೂ ಸೋಲುಣ್ಣುತ್ತಿರುವುದು ಎರಡನೇ ಬಾರಿಯಾಗಿದ್ದು ಇದಕ್ಕೆ ಮುನ್ನ ಕಳೆದ ವರ್ಷ ಹಾಂಗ್ ಕಾಂಗ್ ಓಪನ್ ಪಂದ್ಯಾವಳಿಯಲ್ಲಿ ಸಹ ಸಿಂಧೂ ಕೊರಿಯಾ ಆಟಗಾರ್ತಿಗೆ ಮಣಿಡೀಡ್ಡಾೠ.
ಸಿಂಧೂ, ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಅವರ ಕೋಚ್ ಆಗಿರುವ ಪುಲ್ಲೆಲಾ ಗೋಪಿಚಂದ್ 2001ರಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಆಗಿದ್ದು ಹೊರತುಪಡಿಸಿದರೆ ಇದುವರೆಗೆ ಯಾವೊಬ್ಬ ಭಾರತೀಯನೂ ಪ್ರಶಸ್ತಿ ಜಯಿಸಿಲ್ಲ. ಈ ಬಾರಿ ಸಿಂಧೂ ಸಹ ಮೊದಲ ಸುತ್ತಲ್ಲೇ ಹೊರಬಿದ್ದು ಭಾರತೀಯರ ಭರವಸೆಗೆ ಮತ್ತೆ ತಣ್ಣೀರೆರಚಿದ್ದಾರೆ.
ಪುರುಷರ ವಿಭಾಗದ ಪಂದ್ಯದಲ್ಲಿ ಭಾರತದ ಸಾಯ್ ಪ್ರಣೀತ್ ತನ್ನ ಎದುರಾಳಿ ಇನ್ನೋರ್ವ ಭಾರತೀಯ ಕ್ರೀಡಾಪಟು ಎಚ್ಎಸ್. ಪ್ರಣೋಯ್ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.52 ನಿಮಿಷಗಳ ಪಂದ್ಯದಲ್ಲಿ ಪ್ರಣೀತ್ 21-19, 21-19 ಸೆಟ್ ಗಳಿಂದ ಜಯ ಸಾಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


