ವಿಂಬಲ್ಡನ್: ಮಿಶ್ರ ಡಬಲ್ಸ್ ನಲ್ಲಿ ಬೋಪಣ್ಣಗೆ ಸೋಲು
ಭಾರತದ ಸ್ಟಾರ್ ಆಟಗಾರ ರೋಹನ್ ಬೋಪಣ್ಣ ಅವರು ಪ್ರಸಕ್ತ ವರ್ಷ ನೀರಸ ಪ್ರದರ್ಶನ ನೀಡುತ್ತಿದ್ದು, ವಿಂಬಲ್ಡನ್ ಟೆನಿಸ್ ಟೂರ್ನಿಯಿಂದ ಹೊರ ನಡೆದಿದ್ದಾರೆ.

Published On :
ಲಂಡನ್: ಭಾರತದ ಸ್ಟಾರ್ ಆಟಗಾರ ರೋಹನ್ ಬೋಪಣ್ಣ ಅವರು ಪ್ರಸಕ್ತ ವರ್ಷ ನೀರಸ ಪ್ರದರ್ಶನ ನೀಡುತ್ತಿದ್ದು, ವಿಂಬಲ್ಡನ್ ಟೆನಿಸ್ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಪುರುಷರ ಡಬಲ್ಸ್ ನಲ್ಲಿ ಬೋಪಣ್ಣ ಹಾಗೂ ಪ್ಯಾಬ್ಲೊ ಕ್ಯಾವಾಸ್ ಜೋಡಿ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿತ್ತು. ಮಿಶ್ರ ಡಬಲ್ಸ್ ನಲ್ಲಿ ಚಾಂಪಿಯನ್ ಪಟ್ಟದ ಕನಸು ಕಾಣುತ್ತಿದ್ದ ಬೋಪಣ್ಣ ಅವರಿಗೆ ಪೆಟ್ಟು ಬಿದ್ದಿದೆ.
ಬೋಪಣ್ಣ ಹಾಗೂ ಆರ್ಯನಾ ಸಬಲೆಂಕಾ ಜೋಡಿ 6-4, 6-4 ರಿಂದ ನ್ಯೂಜಿಲೆಂಡ್ ದ ಆರ್ಟಮ್ ಸಿತಾರ್ ಹಾಗೂ ಜರ್ಮನಿಯ ಲಾರಾ ಸೆಂಜಮುಡ್ ವಿರುದ್ಧ ಶನಿವಾರ ಸೋಲು ಅನುಭವಿಸಿತು.
ಶರಣ್ ಆಸೆ ಜೀವಂತ
ಮಿಶ್ರ ಡಬಲ್ಸ್ ನಲ್ಲಿ ಸೋತರೂ ಸಹ ವಿಂಬಲ್ಡನ್ ಪುರುಷರ ಡಬಲ್ಸ್ ನಲ್ಲಿ ಭಾರತದ ದಿಬಿಜ್ ಶರಣ್ ತಮ್ಮ ಹೋರಾಟ ಮುಂದುವರಿಸಿದ್ದಾರೆ. ರಣ್ ಮತ್ತು ಅವರ ಪಾಲುದಾರ ಬ್ರೆಜಿಲ್ ನ ಮಾರ್ಸೆಲೊ ಡೆಮೋಲಿನರ್ ಸೋಮವಾರ ಬ್ರೆಜಿಲ್‌ನ ಮಾರ್ಸೆಲೊ ಮೆಲೊ ಮತ್ತು ಪೋಲೆಂಡ್‌ನ ಲುಕಾಸ್ ಕುಬೊಟ್ ಅವರನ್ನು ಮುಂದಿನ ಸುತ್ತಿನಲ್ಲಿ ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


