ಕ್ರೀಡೆ

ಬಿಡಬ್ಲ್ಯುಎಫ್ ರ್ಯಾಂಕಿಂಗ್:ಸೌರಭ್ ವರ್ಮಾ ಜೀವನಶ್ರೇಷ್ಠ ಸಾಧನೆ

ಲಖನೌದಲ್ಲಿ ನಡೆದ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪಡೆದ ಭಾರತದ ಸೌರಭ್ ವರ್ಮಾ ಅವರು ಮಂಗಳವಾರ ಬಿಡುಗಡೆಯಾದ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಅಗ್ರ -30 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

ಬಿಡಬ್ಲ್ಯುಎಫ್ ರ್ಯಾಂಕಿಂಗ್:ಸೌರಭ್ ವರ್ಮಾ ಜೀವನಶ್ರೇಷ್ಠ ಸಾಧನೆ
ಸೌರಭ್ ವರ್ಮಾ
Published On :

ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್‍ಗೆ ಅರ್ಹತೆ ಪಡೆದ ಸಿಂಧು

ನವದೆಹಲಿ: ಲಖನೌದಲ್ಲಿ ನಡೆದ ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪಡೆದ ಭಾರತದ ಸೌರಭ್ ವರ್ಮಾ ಅವರು ಮಂಗಳವಾರ ಬಿಡುಗಡೆಯಾದ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ ಅಗ್ರ -30 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

ಫೈನಲ್‌ನಲ್ಲಿ ಸೌರಭ್ 48 ನೇ ನಿಮಿಷದಲ್ಲಿ ಕಾದಾಟದಲ್ಲಿ ಎಂಟನೇ ಶ್ರೇಯಾಂಕದ ತೈಪೆಯ ವಾಂಗ್ ಕ್ಸು ವೀ ವಿರುದ್ಧ 15-21, 17-21ರಿಂದ ಸೋತರು. ನೂತನವಾಗಿ ಬಿಡುಗಡೆಗೊಂಡ ಶ್ರೇಯಾಂಕದಲ್ಲಿ ಸೌರಭ್ 36 ರಿಂದ 29 ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. 

ಮಹಿಳಾ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ ರಿತುಪರ್ಣ ದಾಸ್ 46 ಸ್ಥಾನಗಳನ್ನು ಜಿಗಿದು ಈಗ 119 ನೇ ಸ್ಥಾನಕ್ಕೆ ತಲುಪಿದ್ದಾರೆ.

 ಕಳೆದ ವರ್ಷ ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್ ಮತ್ತು ದುಬೈ ಇಂಟರ್ನ್ಯಾಷನಲ್ ಚಾಲೆಂಜ್ ಗೆದ್ದ ಯುವತಿ ಶಟ್ಲರ್ ಅಶ್ಮಿತಾ ಚಲಿಹಾ ಸಹ 18 ಸ್ಥಾನಗಳ ಭಾರಿ ಜಿಗಿತವನ್ನು ಕಂಡು ಅಗ್ರ 100ರಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಸೈಯದ್ ಮೋದಿ ಇಂಟರ್‌ನ್ಯಾಷನಲ್‌ನಿಂದ ಹೊರಗುಳಿದ ಅಗ್ರ ಆಟಗಾರರಾದ ಪಿ.ವಿ. ಸಿಂಧು (ವಿಶ್ವ ನಂ. 6) ಮತ್ತು ಸೈನಾ ನೆಹವಾಲ್ (ವಿಶ್ವ ನಂ .10) ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ಕಳೆದ ವಾರ ಕ್ವಾರ್ಟರ್ಸ್ ಮತ್ತು ಎರಡನೇ ಸುತ್ತಿನಲ್ಲಿ ಸೋತಿದ್ದ ಕಿಡಂಬಿ ಶ್ರೀಕಾಂತ್ ಮತ್ತು ಬಿ. ಸಾಯಿ ಪ್ರಣೀತ್ ಕೂಡ ಕ್ರಮವಾಗಿ ವಿಶ್ವದ 12 ಮತ್ತು 11 ನೇ ಸ್ಥಾನದಲ್ಲಿದ್ದಾರೆ.

ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್‍ಗೆ ಅರ್ಹತೆ ಪಡೆದ ಸಿಂಧು

ವಿಶ್ವ ಚಾಂಪಿಯನ್ ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರು ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್ ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವರ್ಷಾಂತ್ಯದಲ್ಲಿ ನಡೆಯುವ ಬ್ಯಾಡ್ಮಿಂಟನ್ ಪ್ರತಿಷ್ಠಿತ ಟೂರ್ನಿಗೆ ಅರ್ಹತೆ ಪಡೆದಿರುವ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ. ಸಿಂಧು ಐದು ವಿಭಾಗದಲ್ಲಿ ಭಾರತದಿಂದ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಎಂಟು ಆಟಗಾರ್ತಿಯರು ಈ ಕಣದಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ಚೀನಾದ ಗುವಾಂಗ್‍ಝೌನಲ್ಲಿ ಡಿ.11 ರಿಂದ ಟೂರ್ನಿ ಆರಂಭವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.