ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿ: ಸೌರಭ್ ವರ್ಮಾ ರನ್ನರ್ ಅಪ್
ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಸೌರಭ್ ವರ್ಮಾ ಅವರು ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ನಲ್ಲಿ ನಿರಾಸೆ ಕಂಡಿದ್ದಾರೆ.

ಲಖನೌ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಸೌರಭ್ ವರ್ಮಾ ಅವರು ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ನಲ್ಲಿ ನಿರಾಸೆ ಕಂಡಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸೌರಭ್ 15-21, 17-21 ರಿಂದ ಚೈನಿಸ್ ತೇಪಿಯ ವಾಂಗ್ ಜು ವಿ ವಿರುದ್ಧ 48 ನಿಮಿಷಗಳ ಸೆಣಸಾಟದಲ್ಲಿ ಸೋಲು ಕಂಡರು. ಇದು ಸೌರಭ್ ವಿರುದ್ಧ ವಾಂಗ್ ಜು ದಾಖಲಿಸಿದ ಎರಡನೇ ಗೆಲುವಾಗಿದೆ
ಈ ವರ್ಷ ಹೈದರಾಬಾದ್ ಮತ್ತು ವಿಯೆಟ್ನಾಂನಲ್ಲಿ ಎರಡು ಬಿಡಬ್ಲ್ಯೂಎಫ್ ಸೂಪರ್ 100 ಪ್ರಶಸ್ತಿಗಳನ್ನು ಗೆದ್ದು ಸಾಧನೆ ಮೆರೆದಿದ್ದ ಭಾರತೀಯ ಆಟಗಾರ ಈ ಪಂದ್ಯಾವಳಿಯ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಇದಕ್ಕೆ ಮುನ್ನ ಸೆಮಿಫೈನಲ್ಸ್ ನಲ್ಲಿ ಕೊರಿಯಾದ ಎದುರಾಳಿ ಹಿಯೋ ಕ್ವಾಂಗ್ ಹೀ ವಿರುದ್ಧ 21-17, 16-21, 21-18 ಅಂತರದಲ್ಲಿ ಜಯ ದಾಖಲಿಸಿದ ನಂತರ ಫೈನಲ್ಸ್ ತಲುಪಿದ್ದ ಸೌರಭ್ ಪಂದ್ಯಾವಳಿಯ ಈ ಹಂತಕ್ಕೆ ತಲುಪಿದ ಏಕೈಕ ಭಾರತೀಯ ಶೆಟ್ಲರ್ ಆಗಿದ್ದರು. ಭಾರತದ ಪರ ಪಿವಿ ಸಿಂಧೂ, ಸೈನಾ ನೆಹ್ವಾಲ್ ಆಟದಿಂದ ದೂರ ಉಳಿದರೆ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ಸ್ ಹಂತದಲ್ಲಿ ಸೋತು ನಿರ್ಗಮಿಸಿದ್ದರು./
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


