ವೀಡಿಯೋ: ವಿಶ್ವಚಾಂಪಿಯನ್ ಸಿಂಧೂಗೆ ದೆಹಲಿಯಲ್ಲಿ ಅಭೂತಪೂರ್ವ ಸ್ವಾಗತ
ವಿಶ್ವ ಚಾಂಪಿಯನ್ ಪಿ ವಿ ಸಿಂಧೂ ತಾವು ಚಾಂಪಿಯನ್‌ಶಿಪ್ ವಿಜಯದ ನಂತರ ಅಭೂತಪೂರ್ವ ಸ್ವಾಗತದ ನಡುವೆ ಮಂಗಳವಾರ ನಸುಕಿನ ಜಾವ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ವಿಶ್ವ ಚಾಂಪಿಯನ್ ಪಿ ವಿ ಸಿಂಧೂ ತಾವು ಚಾಂಪಿಯನ್‌ಶಿಪ್ ವಿಜಯದ ನಂತರ ಅಭೂತಪೂರ್ವ ಸ್ವಾಗತದ ನಡುವೆ ಮಂಗಳವಾರ ನಸುಕಿನ ಜಾವ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ರಾಷ್ಟ್ರ ರಾಜಧಾನಿಗೆ ಆಗಮಿಸಿದ ಪಿ.ವಿ ಸಿಂಧು, ಮಾಧ್ಯಮಗಳೊಂದಿಗೆ ಸಂಕ್ಷಿಪ್ತ ಸಂವಾದ ನಡೆಸಿದ್ದು ತನ್ನ ಐತಿಹಾಸಿಕ ಸಾಧನೆಗಾಗಿ ತನ್ನ ತರಬೇತುದಾರರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಹೈದರಾಬಾದ್ ಮೂಲದ 24 ವರ್ಷದ ಸಿಂಧೂ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. "ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ, ನನಗೆ ಬೆಂಬಲಿಸಿ ಆಶೀರ್ವಾದ ನಿಡಿದ ನ್ನ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು. ನಾನು ಹೆಚ್ಚು ಶ್ರಮಿಸುತ್ತೇನೆ ಮತ್ತು ಇನ್ನೂ ಅನೇಕ ಪದಕಗಳನ್ನು ಪಡೆಯುತ್ತೇನೆ ಇದು ನನ್ನ ಬಹುನಿರೀಕ್ಷಿತ ಗೆಲುವು, ಕಳೆದೆರಡು ಬಾರಿ ಈ ಗೆಲುವಿನಿಂದ ವಂಚಿತಳಾಗಿದ್ದೆ.ಆದರೆ ಅಂತಿಮವಾಗಿ ನಾನು ಗುರಿ ಮುಟ್ಟಿದ್ದೇನೆ." ಎಂದು ಅವರು ಹೇಳಿದ್ದಾರೆ.
"ನನ್ನ ಪಾಲಿಗಿದು ದೊಡ್ಡ ಕ್ಷಣ, ನಾನು ಭಾರತೀಯಳಾಗಿರಲು ಹೆಮ್ಮೆ ಇದೆ" ಸಿಂಧೂ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


