ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್: ಪ್ರಣಯ್ ಗೆ ನಿರಾಸೆ
ಬಾಸೆಲ್ ಭರವಸೆಯ ಆಟಗಾರ ಎಚ್.ಎಸ್ ಪ್ರಣಯ್ ಅವರು ಇಲ್ಲಿ ನಡೆದಿರುವ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮೂರನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ.

ಬಾಸೆಲ್: ಬಾಸೆಲ್ ಭರವಸೆಯ ಆಟಗಾರ ಎಚ್.ಎಸ್ ಪ್ರಣಯ್ ಅವರು ಇಲ್ಲಿ ನಡೆದಿರುವ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮೂರನೇ ಸುತ್ತಿನಲ್ಲಿ ಆಘಾತ ಅನುಭವಿಸಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರಣಯ್ 19-21, 12-21 ರಿಂದ ಜಪಾನ್ ನ ಕೆಂಟೊ ಮೊಮೊಟೊ ವಿರುದ್ಧ ಎರಡು ನೇರ ಸೆಟ್ ಗಳಲ್ಲಿ ಪರಾಜಯಹೊಂದಿದರು. ಪ್ರಣಯ್ ಇದೇ ಆಟಗಾರನ ವಿರುದ್ಧ ಆರು ಬಾರಿ ಮುಖಾಮುಖಿಯಾಗಿದ್ದು, ಆರರಲ್ಲೂ ಸೋಲು ಕಂಡಿದ್ದಾರೆ.
ಮೊದಲ ಗೇಮ್ ನ ಆರಂಭದಲ್ಲಿ 3-3 ಅಂಕಗಳಿಂದ ಸಮಬಲ ಸಾಧಿಸಿದ್ದ ಪ್ರಣಯ್, ನಂತರ ಕೊಂಚ ಹಿನ್ನಡೆ ಅನುಭವಿಸಿದರು. ಬಳಿಕ ಭರ್ಜರಿ ಪ್ರದರ್ಶನ ನೀಡಿದ ಅವರು, 12-12 ಹಾಗೂ 14-14 ರಿಂದ ಸಮಬಲ ಸಾಧಿಸಿ ಎದುರಾಳಿಗೆ ಶಾಕ್ ನೀಡಿದರು. ಆದರೆ, ಕೊನೆಯಲ್ಲಿ ಜಪಾನ್ ಆಟಗಾರ ಅಮೋಘವಾಗಿ ಆಡಿ ಜಯ ಸಾಧಿಸಿದರು. ಎರಡನೇ ಹಾಗೂ ನಿರ್ಣಾಯಕ ಗೇಮ್ ನಲ್ಲೂ ಪ್ರಣಯ್ ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


