ಥಾಯ್ಲೆಂಡ್ ಓಪನ್: ರಂಕಿರೆಡ್ಡಿ - ಚಿರಾಗ್ ಜೋಡಿಗೆ ಕಿರೀಟ
ಭಾರತದ ಅಗ್ರ ಶ್ರೇಯಾಂಕಿತ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‍ರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಪ್ರಶಸ್ತಿ ಗೆಲ್ಲುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Published On :
ಬ್ಯಾಂಕಾಕ್: ಭಾರತದ ಅಗ್ರ ಶ್ರೇಯಾಂಕಿತ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‍ರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಪ್ರಶಸ್ತಿ ಗೆಲ್ಲುವುದರ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಭಾನುವಾರ ಇಲ್ಲಿ ನಡೆದ ಫೈನಲ್ಸ್ ನಲ್ಲಿ ಈ ಜೋಡಿ ಚೀನಾದ ಲಿ-ಜುನ್-ಹುಯಿ ಮತ್ತು ಲಿಯು-ಯು ಚೆನ್ ಜೋಡಿಯನ್ನು ಮಣಿಸಿ ಭಾರತಕ್ಕೆ ಕೀರ್ತಿ ತಂದು ಕೊಟ್ಟಿದ್ದಾರೆ.
ಚಿರಾಗ್ ಮತ್ತು ಸಾತ್ವಿಕ್ ರಾಜ್ ತಮ್ಮ ಡಬಲ್ಸ್ ವೃತ್ತಿಜೀವನದ ಅತಿದೊಡ್ಡ ಪ್ರಶಸ್ತಿಗಾಗಿ ನಡೆದ ಪಂದ್ಯದಲ್ಲಿ ಚೀನಾದ ಮೂರನೇ ಶ್ರೇಯಾಂಕದ ಜೋಡಿಯನ್ನು 21-19, 18-21, 21-18ರಿಂದ ಪರಾಭವಗೊಳಿಸಿದರು.
ವಿಶ್ವದ 16ನೇ ಕ್ರಮಾಂಕದ ಭಾರತೀಯ ಜೋಡಿ ಆತ್ಮವಿಶ್ವಾಸದಿಂದ ಆಟವನ್ನು ಪ್ರಾರಂಭಿಸಿದ್ದು ಮೊದಲ ಸುತ್ತಿನಲ್ಲಿ 7-3ರ ಮುನ್ನಡೆ ಸಾಧಿಸಿತ್ತು. ಮತ್ತು ರಂಕಿರೆಡ್ಡಿ ಮೊದಲು ಆಟವನ್ನು 15-15ರಲ್ಲಿ ಸಮಗೊಳಿಸಿತ್ತು ಆದರೆ ಎರಡನೇ ಸುತ್ತಿನ ಆಟ ಪ್ರಾರಂಭದಲ್ಲಿಯೇ ಭಾರತೀಯ ಜೋಡಿಯೆ ಕಠಿಣವಾಗಿ ಪರಿಣಮಿಸಿತ್ತು.ಮತ್ತು ಅಂತಿಮ ವಿರಾಮಕ್ಕೆ ಹೋಈಗುವ ಮುನ್ನ ಭಾರತೀಯರು 3-6 ಅಂತರದಿಂದ ಹಿಂದೆ ಬಿದ್ದರು.ಆದರೆ ಪ್ರಶಸ್ತಿ ನಿರ್ಣಾಯಕವಾಗುವ ವೇಳೆಗೆ ಐದು ಅಂಕಗಳೊಡನೆ 8-6ರ ಮುನ್ನಡೆ ಸಾಧಿಸಿದ್ದರು. ಅಂತಿಮವಾಗಿ ಭಾರತೀಯ ಜೋಡಿ 62 ನಿಮಿಷಗಳಲ್ಲಿ ಪಂದ್ಯವನ್ನು ಜಯಿಸಿ ಹೊಸ ತಿಹಾಸವೊಂದನ್ನು ಸೃಷ್ಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Thailand OpenSatwiksairaj RankireddyChirag Shettyಥಾಯ್ಲಾಂಡ್ ಓಪನ್ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿಚಿರಾಗ್ ಶೆಟ್ಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


