ಥಾಯ್ಲೆಂಡ್ ಓಪನ್: ರಂಕಿರೆಡ್ಡಿ - ಚಿರಾಗ್ ಫೈನಲ್ ಪ್ರವೇಶ
ಅಮೋಘ ಪ್ರದರ್ಶನ ಮುಂದುವರಿಸಿರುವ ಭಾರತದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 2014 ರ ವಿಶ್ವ ಚಾಂಪಿಯನ್ ಕೋ ಸುಂಗ್ ಹ್ಯುನ್ / ಶಿನ್ ಬೇಕ್ ಚಿಯೋಲ್ ಅವರನ್ನು....

Published On :
ಬ್ಯಾಂಕಾಕ್: ಅಮೋಘ ಪ್ರದರ್ಶನ ಮುಂದುವರಿಸಿರುವ ಭಾರತದ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 2014 ರ ವಿಶ್ವ ಚಾಂಪಿಯನ್ ಕೋ ಸುಂಗ್ ಹ್ಯುನ್ / ಶಿನ್ ಬೇಕ್ ಚಿಯೋಲ್ ಅವರನ್ನು ಪರಾಭವಗೊಳಿಸಿ ಥಾಯ್ಲೆಂಡ್ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ಫೈನಲ್ ಪ್ರವೇಶಿಸಿದ್ದಾರೆ.
ಭಾರತೀಯ ಜೋಡಿ ಮೊದಲ ಪಂದ್ಯವನ್ನು 22-20ರಿಂದ ಗೆದ್ದುಕೊಂಡಿದ್ದರೆ ಆದರೆ ಎಅರ್ಡನೇ ಸುತ್ತಿನಲ್ಲಿ ಕೊರಿಯನ್ ಜೋಡಿ 24-22ಸೆಟ್ ಗಳಿಂದ ಗೆದ್ದು ಸಮಬಲ ಸಾಧಿಸಿತ್ತು. ಆದರೆ ಮೂರನೇ ಸುತ್ತಿನಲ್ಲಿ ಭಾರತದ ಜೋಡಿ ಎದುರಾಳಿಗಳಿಗೆ ತೀವ್ರ ಸ್ಪರ್ಧೆಯೊಡ್ಡಿ 21-9 ರಲ್ಲಿ ಕಟ್ಟಿಹಾಕಿತ್ತು.
ಫೈನಲ್ ಪಂದ್ಯವು ಭಾನುವಾರ ನಡೆಯಲಿದ್ದು ಭಾರತೀಯ ಜೋಡಿ ಚೀನಾ ಜೋಡಿಯಾದ ಲಿ ಜುನ್ ಹುಯಿ ಮತ್ತು ಲಿಯು ಯು ಚೆನ್ ಅವರನ್ನು ಎದುರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Thailand OpenSatwiksairaj RankireddyChirag Shettyಥಾಯ್ಲಾಂಡ್ ಓಪನ್ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿಚಿರಾಗ್ ಶೆಟ್ಟಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


