ಐಎಸ್‌ಎಸ್‌ಎಫ್ ವಿಶ್ವಕಪ್: ಭಾರತದ ದಿವ್ಯಾಂಶ್ ಸಿಂಗ್‌ಗೆ ಬೆಳ್ಳಿ ಪದಕ
ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್(ಪಿಸ್ತೂಲ್/ರೈಫಲ್)ನ ಪುರುಷರ 10 ಮೀ ಏರ್ ರೈಫಲ್‌ನಲ್ಲಿ ಭಾರತದ...

Published On :
ಬೀಜಿಂಗ್: ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್(ಪಿಸ್ತೂಲ್/ರೈಫಲ್)ನ ಪುರುಷರ 10 ಮೀ ಏರ್ ರೈಫಲ್‌ನಲ್ಲಿ ಭಾರತದ ದಿವ್ಯಾಂಶ್ ಸಿಂಗ್ ಪನ್ವಾರ್ ಅವರು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಚಿನ್ನದ ಪದಕ ವಿಜೇತ ಚೀನಾದ ಹುಯಿ ಝಿನ್ಚೆಂಗ್ ಅವರಿಗಿಂತ ಭಾರತದ ಶೂಟರ್ ಕೇವಲ 0.4 ಅಂತರದಲ್ಲಿ ಹಿನ್ನಡೆಯಲಿದ್ದರು. ಚೀನಾದ ಶೂಟರ್ ಫೈನಲ್ ಸುತ್ತಿನಲ್ಲಿ ಒಟ್ಟು 249.4 ಅಂಕಗಳನ್ನು ಗಳಿಸಿದರು. ರಷ್ಯಾದ ಗ್ರಿಗೋರಿ ಶಾಮಕೋವ್ 227.4 ಅಂಕಗಳನ್ನು ಪಡೆದು ಕಂಚಿನ ಪದಕಕ್ಕೆ ತೃಪ್ತರಾದರು.
ಭಾರತದ ದಿವ್ಯಾಂಶ್ ಗುರುವಾರ ಮಿಶ್ರ ಶೂಟಿಂಗ್ ತಂಡದಲ್ಲಿ ಚಿನ್ನದ ಪದಕ ಜಯಿಸಿದ್ದರು. ಭಾರತದ ಮಹಿಳಾ 10 ಮೀ. ರೈಫಲ್ ವಿಭಾಗದಲ್ಲಿ ಅಪೂರ್ವಿ ಚಂದೇಲಾ ಹಾಗೂ ಅಂಜುಮ್ ಮೌದ್ಗಿಲ್ ಹಾಗೂ ಪುರುಷರ ವಿಭಾಗದಲ್ಲಿ ಸೌರಭ್ ಚೌಧರಿ ಹಾಗೂ ದಿವ್ಯಾಂಶ್ ಸಿಂಗ್ ಪನ್ವಾರ್ ಅವರು ಸೇರಿದಂತೆ ಒಟ್ಟು ನಾಲ್ವರು 10ಮೀ ಏರ್ ರೈಫಲ್ ವಿಭಾಗದಲ್ಲಿ ಮುಂಬರುವ ಒಲಿಂಪಿಕ್‌ಗೆ ಅರ್ಹತೆ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಳ್ಳಿ ಪದಕISSF World Cup 2019Divyansh Singh Panwarwins silverಐಎಸ್‌ಎಸ್‌ಎಫ್ ವಿಶ್ವಕಪ್ದಿವ್ಯಾಂಶ್ ಸಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


