ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಮೊದಲ ದಿನವೇ ಭಾರತಕ್ಕೆ ಸ್ವರ್ಣ ಸಂಭ್ರಮ
ಚೀನಾದ ಕ್ಸಿಯಾನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಸಯತ್ಬೇಕ್ ಒಕಾಸಾವ್ ಅವರನ್ನು 12-7 ಅಂಕಗಳಿಂದ ಮಣಿಸಿದ ಬಾರತದ ನಲ್ಮೆಯ ಕುಸ್ತಿಪಟು ಬಜರಂಗ್ ಪುನಿಯಾ ಚಿನ್ನದ ಪದಕ ಗಳಿಸಿದರು.

Published On :
ಕ್ಸಿಯಾನ್(ಚೀನಾ) ಚೀನಾದ ಕ್ಸಿಯಾನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಸಯತ್ಬೇಕ್ ಒಕಾಸಾವ್ ಅವರನ್ನು 12-7 ಅಂಕಗಳಿಂದ ಮಣಿಸಿದ ಬಾರತದ ನಲ್ಮೆಯ ಕುಸ್ತಿಪಟು ಬಜರಂಗ್ ಪುನಿಯಾ ಚಿನ್ನದ ಪದಕ ಗಳಿಸಿದರು.
65 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ಪುನಿಯಾ ಈ ಸಾಧನೆ ಮಾಡಿದ್ದಾರೆ. ಚಿಆನಾದ ಎದುರಾಳಿಗೆ ಮೊದಲ ಸುತ್ತಿನಲ್ಲಿ 2-5 ಅಂತರದಿಂದ ಸೋತಿದ್ದ ಪುನಿಯಾ ಕಡೆಗೆ ಅಂತಿಮವಾಗಿ 12-7 ಅಂತರದ ಜಯ ಸಾಧಿಸಿದ್ದರು.
ಮಂಗಳವಾರದಿಂದ ಪ್ರಾರಂಬವಾಗಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ಮೊದಲ ದಿನ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕ ಇದಾಗಿದೆ.
2017ರ ಸಾಲಿನಲ್ಲಿ ಪುನಿಯಾ ಇದೇ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿ ಸಾಧನೆ ಮೆರೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


