ಸಂಗೀತ ನಿರ್ದೇಶಕ ರೆಹಮಾನ್, ಗೀತ ರಚನೆಗಾರ ಗುಲ್ಜಾರ್ ರಿಂದ ಹಾಕಿ ವಿಶ್ವಕಪ್ ಶೀರ್ಷಿಕೆ ಗೀತೆ!
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸರ್ಕಾರ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಗೀತ ರಚನೆಗಾರ ಗುಲ್ಜಾರ್ ಅವರೊಂದಿಗೆ ಪುರುಷರ ಹಾಕಿ ವಿಶ್ವಕಪ್ 2018 ರ ಶೀರ್ಷಿಕೆ ಗೀತೆ....

Published On :
ಭುವನೇಶ್ವರ್: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸರ್ಕಾರ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಗೀತ ರಚನೆಗಾರ ಗುಲ್ಜಾರ್ ಅವರೊಂದಿಗೆ ಪುರುಷರ ಹಾಕಿ ವಿಶ್ವಕಪ್ 2018 ರ ಶೀರ್ಷಿಕೆ ಗೀತೆ ರಚಿಸಲು ಸಹಯೋಗ ನಡೆಸಲಿದೆ ಎಂದು ಘೋಷಿಸಿದೆ.
ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಪ್ರಕಟಣೆ ನಿಡಿರುವ ಪಟ್ನಾಯಕ್ ಈ ವರ್ಷಒಡಿಶಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ರಹಮಾನ್ ಲೈವ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ ಎಂದು ಹೇಳಿದ್ದಾರೆ.
"ಭಾರತದ ಹೆಮ್ಮೆ ಎ ಆರ್ ರೆಹಮಾನ್ ಹಾಗೂ ಗಲ್ಝಾರ್ ಸಾಹಬ್ ಜೊತೆ ಸೇರಿ ಹಾಕಿ ವಿಶ್ವಕಪ್ 2018 ಉದ್ಘಾಟನಾ ಗೀತೆ ರಚನೆಗಾಗಿ ಸಹಯೋಗ ನಿಡಲಿದೆ. ಉದ್ಘಾಟನಾ ಸಮಾರಂಭದಲ್ಲಿ ಒಡಿಶಾದಲ್ಲಿ ರೆಹಮಾನ್ ಇದೇ ಪ್ರಥಮ ಬಾರಿಗೆ ಲೈವ್ ಪರ್ಫಾರ್ಮೆನ್ಸ್ ಅನ್ನು ನೀಡಲಿದ್ದಾರೆ." ಅವರು ಬರೆದುಕೊಂಡಿದ್ದಾರೆ.
ಹಾಕಿ ವಿಶ್ವಕಪ್ ನ 14 ನೆಯ ಆವೃತ್ತಿಯು ನವೆಂಬರ್ 28 ರಿಂದ ಡಿಸೆಂಬರ್ 16 ರವರೆಗೆ ಒಡಿಶಾದಲ್ಲಿ ನಡೆಯಲಿದೆ. ಕ್ರೀಡಾಕೂಟ ಆಯೋಜಕ ರಾಷ್ಟ್ರ ಭಾರತದೊಡನೆ ಜಗತ್ತಿನ ಹದಿನಾರು ರಾಷ್ಟ್ರೀಯ ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸೆಣಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವೀನ್ ಪಟ್ನಾಯಕ್AR RahmanGulzarಗುಲ್ಜಾರ್Naveen PatnaikHockey Men\'s World Cup 2018ಎ.ಆರ್. ರಹಮಾನ್ಹಾಕಿ ವಿಶ್ವಕಪ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


