ಏಷ್ಯನ್ ಗೇಮ್ಸ್ ಹಾಕಿ: ಪಾಕಿಸ್ತಾನವನ್ನು ಸೋಲಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತ!
ಷ್ಯನ್ ಕ್ರೀಡಾಕುಟದ ಪುರುಷರ ಹಾಇ ವಿಭಾಗದಲ್ಲಿ ಭಾರತ್ ಪಡೆ ಪಾಕ್ ವಿರುದ್ಧ ಜಯ ಗಳಿಸುವ ಮೂಲಕ ಕಂಚಿನ ಪದಕ ವಿಜೇತ ತಂಡವಾಗಿ ಹೊರಹೊಮ್ಮಿದೆ.

Published On :
ಜಕಾರ್ತಾ: ಏಷ್ಯನ್ ಕ್ರೀಡಾಕುಟದ ಪುರುಷರ ಹಾಇ ವಿಭಾಗದಲ್ಲಿ ಭಾರತ್ ಪಡೆ ಪಾಕ್ ವಿರುದ್ಧ ಜಯ ಗಳಿಸುವ ಮೂಲಕ ಕಂಚಿನ ಪದಕ ವಿಜೇತ ತಂಡವಾಗಿ ಹೊರಹೊಮ್ಮಿದೆ.
ಹಾಕಿ ಸೆಮಿ ಫೈನಲ್ಸ್ ನಲ್ಲಿ ಮಲೇಷಿಯಾ ವಿರುದ್ಧ ಪಾರಭವಗೊಂಡಿದ್ದ ಭಾರತ ತಂಡ ಇಂದು ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಪಾಕಿಸ್ಥಾನವನ್ನು ಮಣಿಸಿದೆ.
ಪಾಕಿಸ್ಥಾನದ ವಿರುದ್ಧ ಭಾರತ ಪುರುಷರ ಪಡೆ 2-1 ಅಂತರದ ಜಯ ದಾಖಲಿಸಿದೆ.
ಭಾರತದ ಪರ ಆಕಾಶ್ ದೀಪ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಕ್ರಮವಾಗಿ 3ನೇ ಹಾಗೂ 50ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದ್ದರು.
ಪಾಕ್ ಪರವಾಗಿ ಮಹಮದ್ ಅತೀಕ್ ಪಂದ್ಯದ 52ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದ್ದಾರೆ.
ಪಾಕ್ ನಾಲ್ಕು ಪೆನಾಲ್ಟಿ ಕಾರ್ನರ್ ಗಳನ್ನು ಗೋಲು ಗಳಿಸಿಕೊಳ್ಳುವಲ್ಲಿ ವಿಫಲವಾದರೆ ಭಾರತ ಎರಡು ಪೆನಾಲ್ಟಿ ಕಾರ್ನರ್ ಗಳಲ್ಲಿ ಒಂದನ್ನು ಗೋಲು ಗಳಿಸಿಅಲು ಬಳಸಿತ್ತು.
ಇದರೊಡನೆ ಭಾರತ್ದ ಒಟ್ಟು ಪದಕದ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ಒತ್ಟಾರೆ 57 ಪದಕ ಗಳಿಸಿದ್ದ ಭಾರತ ಈ ಬಾರಿ ಒಟ್ಟೂ ಪದಕಗಳ ಸಂಖ್ಯೆಯಲ್ಲಿ ನೂತನ ದಾಖಲೆ ನಿರ್ಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


