ಕ್ರೀಡೆ

ಹಾಕಿ ಏಷ್ಯನ್ ಚಾಂಪಿಯನ್ಸ್ ಭಾರತ-ಮಲೇಷಿಯಾ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಅಂತ್ಯ

ಮಸ್ಕತ್ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತ-ಮಲೇಷಿಯಾ ನಡುವೆ ನಡೆದ ಪಂದ್ಯವು ಗೋಲುರಹಿತ ಡ್ರಾದಲ್ಲಿ ಅಂತ್ಯವಾಗಿದೆ.

ಹಾಕಿ ಏಷ್ಯನ್ ಚಾಂಪಿಯನ್ಸ್ ಭಾರತ-ಮಲೇಷಿಯಾ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಅಂತ್ಯ
ಸಂಗ್ರಹ ಚಿತ್ರ
Published On :
ನವದೆಹಲಿ: ಮಸ್ಕತ್ ನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತ-ಮಲೇಷಿಯಾ ನಡುವೆ ನಡೆದ ಪಂದ್ಯವು ಗೋಲುರಹಿತ ಡ್ರಾದಲ್ಲಿ ಅಂತ್ಯವಾಗಿದೆ.
ತನ್ನದೇ ತಪ್ಪಿನಿಂದ ಹಲವು ಬಾರಿ ಗೋಲು ಗಳಿಸುವ ಅವಕಾಶವನ್ನು ಭಾರತ ಕೈಚೆಲ್ಲುವ ಮೂಲಕ ಗೆಲುವಿನ ಅವಕಾಶವನ್ನು ಕಳೆದುಕೊಂಡಿದೆ. ಆದರೆ ಇದಾಗಲೇ ಸರಣಿಯಲ್ಲಿ ಪ್ರಾರಂಭದಿಂದ ವಿಜಯೀ ತಂಡವಾಗಿ ಮುಂದುವರಿದಿರುವ ಭಾರತ ಈ ಡ್ರಾ ಹೊರತಾಗಿಯೂ ಅಗ್ರಸ್ಥಾನದಲ್ಲಿದ್ದು ಸೆಮಿ ಫೈನಲ್ಸ್ ಪ್ರವೇಶ ಖಚಿತಪಡಿಸಿಕೊಂಡಿದೆ.
ಅತ್ತ ಮಲೇಷಿಯಾ ಸಹ ಇದುವರೆಗೆ ನಡೆದಿರುವ ಎಲ್ಲಾ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಕಾರಣ ಈ ಪಂದ್ಯದಲ್ಲಿ ಗೋಲು ಗಳಿಸದೆ ಡ್ರಾ ಸಾಧಿಸಿದ್ದರೂ ಆ ತಂಡ ಸಹ ಸೆಮೀಸ್ ಪ್ರವೇಸಿಸಲು ಯಶಸ್ವಿಯಾಗಿದೆ.
ಈ ಹಿಂದೆ ಏಷ್ಯನ್ ಗೇಮ್ಸ್ ಸೆಮಿ ಫೈನಲ್ಸ್ ನಲ್ಲಿ ಭಾರತ ಮಲೇಷಿಯಾ ವಿರುದ್ಧ ಸೋಲು ಅನುಭವಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಭಾರತ ಹಾಕಿ ತಂಡಕ್ಕೆ ಇಲ್ಲಿ ಸಹ ಡ್ರಾ ಸಾಧಿಸಲಷ್ಟೇ ಸಾದ್ಯವಾಗಿದ್ದು ಗೆಲುವು ಮರಿಚೀಕೆಯಾಗಿಯೇ ಉಳಿದಿದೆ.
ಇನ್ನು ಸರಣಿಯಲ್ಲಿ ಭಾರತ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ. ಹಾಗೆಯೇ ಮಲೇಷಿಯಾ ಪಾಕಿಸ್ತಾನದೊಡನೆ ಸೆಣೆಸಲು ಸಜ್ಜಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.