ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 9-0 ಅಂತರದ ಭರ್ಜರಿ ಜಯ
ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ತಂಡ ಅದ್ಭುತ ಆಟವಾಡಿದ್ದು ಎದುರಾಳಿ ಜಪಾನ್ ವಿರುದ್ಧ 9-0ಅಂತರದ ಬೃಹತ್ ಗೆಲುವು ಸಾಧಿಸಿದೆ.

Published On :
ನವದೆಹಲಿ: ಏಷ್ಯಾ ಕಪ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ತಂಡ ಅದ್ಭುತ ಆಟವಾಡಿದ್ದು ಎದುರಾಳಿ ಜಪಾನ್ ವಿರುದ್ಧ 9-0 ಅಂತರದ ಬೃಹತ್ ಗೆಲುವು ಸಾಧಿಸಿದೆ.
ಕ್ರೀಡಾಕೂಟದಲ್ಲಿನ ಮೂರನೇ ಪಂದ್ಯದಲ್ಲಿ ಭಾರತ ಜಪಾನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು ಒಟ್ಟು 9 ಅಂಕಗಳೊಡನೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತದ ಆಟಗಾರರು ಏಷ್ಯನ್ ಗೇಮ್ಸ್ ಚಾಂಪಿಯನ್ ತಂಡವಾದ ಜಪಾನ್ ಗೆ ಒಂದೂ ಗೋಲು ದಾಖಲಿಸಲು ಅವಕಾಶವನ್ನೇ ನೀಡದೆ ಹೋದದ್ದು ವಿಶೇಷವಾಗಿತ್ತು.
ಭಾರತ ಪರವಾಗಿ ಲಲಿತ್ ಉಪಧ್ಯಾಯ್ (4ನೇ ನಿಮಿಷ), ಗೋಲು ಗಳಿಸುವುದರೊಡನೆ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರೆ ಬಳಿಕ ಲಲಿತ್ ಉಪಧ್ಯಾಯ್ ಹೀಗೆ ಭಾರತೀಯ ಆಟಗಾರರು ಒಬ್ಬರ ಹಿಂದೊಬ್ಬರು ಗೋಲು ದಾಕಲಿಸುತ್ತಾ ಹೋದರು.
ಉಪಧ್ಯಾಯ್ ಮತ್ತು ಮನ್‌ದೀಪ್ ಸಿಂಗ್ ತಲಾ ಎರಡು ಗೋಲು ಗಳಿಸಿ ಗಮನ ಸೆಳೆದಿದ್ದರು.
ಭಾರತೀಯ ತಂಡದ ಕೋಚ್ ಹರೇಂದ್ರ ಸಿಂಗ್ ತಂಡದ ಈ ಅಮೋಘ ಪ್ರದರ್ಶನದಿಂದ ಸಂತಸಗೊಂಡಿದ್ದಾರೆ."ನಾವು ಆಡಿದ ರೀತಿ ಉತ್ತಮವಾಗಿತ್ತು. ಒಂದು ಯೋಜನಾಬದ್ದ ರೀತಿಯಲ್ಲಿ ಆಟವಾಡಿದ್ದೇವೆ.ಹಾಗೆಯೇ ಜಪಾನ್ ತಂಡವನ್ನು ಅವರ ನಿರ್ದಿಷ್ಟ ರೀತಿಯಲ್ಲಿ ಆಟವಾಡಲು ಬಿಡದೆ ಕಟ್ಟಿ ಹಾಕಿದ್ದೆವು" ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


